»   » ಕಳಚಿದ ಗೆಜ್ಜೆ : ಸಿನಿನೃತ್ಯ ನಿರ್ದೇಶಕ ಉಡುಪಿ ಜಯರಾಂ ನಿಧನ

ಕಳಚಿದ ಗೆಜ್ಜೆ : ಸಿನಿನೃತ್ಯ ನಿರ್ದೇಶಕ ಉಡುಪಿ ಜಯರಾಂ ನಿಧನ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರೋದ್ಯಮದ ಪ್ರಸಿದ್ಧ ನೃತ್ಯ ನಿರ್ದೇಶಕ ಉಡುಪಿ ಜಯರಾಂ ಅ.13ರ ಬುಧವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು .

ಕನ್ನಡ, ತಮಿಳು, ಒರಿಯಾ, ತೆಲುಗು ಸೇರಿದಂತೆ ವಿವಿಧ ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಿಗೆ ಉಡುಪಿ ಜಯರಾಂ ನೃತ್ಯ ನಿರ್ದೇಶನ ಮಾಡಿದ್ದರು. ವರನಟ ರಾಜ್‌ಕುಮಾರ್‌, ವಿಷ್ಣು , ಅಂಬರೀಷ್‌ ಸೇರಿದಂತೆ ಕನ್ನಡದ ಬಹುತೇಕ ಹಿರಿಯ ನಟರ ಚಿತ್ರಗಳಿಗೆ ಜಯರಾಂ ನೃತ್ಯ ನಿರ್ದೇಶಿಸಿದ್ದಾರೆ.

ಜಯರಾಂ ನೃತ್ಯ ನಿರ್ದೇಶಿಸಿದ ರಾಜ್‌-ಜಯಪ್ರದಾ ಅಭಿನಯದ ಸನಾದಿ ಅಪ್ಪಣ್ಣ ಹಾಗೂ ಕವಿರತ್ನ ಕಾಳಿದಾಸ ಚಿತ್ರಗಳು ದಾಖಲೆ ಪ್ರದರ್ಶನ ಕಂಡಿವೆ.

English summary
Udupi Jayaram, Senior choreographer of Sandalwood died in Chennai on Oct. 13th 2004

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada