»   » ಸಿನಿಪ್ರಶಸ್ತಿ ಆಯ್ಕೆ ಸಮಿತಿಗೆ ನಾಗತಿಹಳ್ಳಿ ಚಂದ್ರು ರಾಜೀನಾಮೆ

ಸಿನಿಪ್ರಶಸ್ತಿ ಆಯ್ಕೆ ಸಮಿತಿಗೆ ನಾಗತಿಹಳ್ಳಿ ಚಂದ್ರು ರಾಜೀನಾಮೆ

Posted By: Staff
Subscribe to Filmibeat Kannada
Nagathihalli Chandrashekhar
ಬೆಂಗಳೂರು : 2003-04ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂತೂಇಂತೂ ಸಮಿತಿ ರಚನೆಯಾಯಿತಲ್ಲ ಎಂದು ಗಾಂಧಿನಗರಿಗರು ನಿಟ್ಟುಸಿರು ಬಿಡುತ್ತಿರುವಾಗಲೇ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ರಾಜಿನಾಮೆ ನೀಡಿದ್ದಾರೆ. ಇದರಿಂದಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಗತಿಹಳ್ಳಿ ಚಂದ್ರು ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಅವರ ಮೇಲಿನ ಒತ್ತಡ ಹೆಚ್ಚಾಯಿತು. ಪ್ರಶಸ್ತಿಗೆ ತಮ್ಮ ಚಿತ್ರಗಳನ್ನು ಪರಿಗಣಿಸುವಂತೆ ಅನೇಕರು ಒತ್ತಡ ಹೇರಲಾರಂಭಿಸಿದರು. ಈ ಪೀಕಲಾಟವೇ ಬೇಡವೆಂದು ನಾಗತಿಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಗಾಂಧಿನಗರದಲ್ಲಿ ಗುಲ್ಲೆದ್ದಿದೆ.

ತಮ್ಮ ರಾಜೀನಾಮೆಯ ಸುತ್ತಲಿನ ವದಂತಿಗಳನ್ನು ನಾಗತಿಹಳ್ಳಿ ತಳ್ಳಿಹಾಕಿದ್ದು , ಬಿಡುವಿರದ ಕಾರ್ಯಕ್ರಮಗಳಿಂದಾಗಿ ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನಾನು ಹೊಸ ಚಿತ್ರದ ಸ್ಕಿೃಪ್ಟ್‌ ಸಿದ್ಧಪಡಿಸುತ್ತಿದ್ದೇನೆ. ಹಾಗಾಗಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ್ಫಸ್ಥಾನಕ್ಕೆ ನ್ಯಾಯ ಒದಗಿಸುವುದು ಹೇಗೆ ಸಾಧ್ಯವಿಲ್ಲ , ಆ ಕಾರಣದಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗತಿಹಳ್ಳಿ ಹೇಳಿದ್ದಾರೆ.

English summary
Writer and filmmaker Nagathihalli Chandrashekhar resigned as Chairman of the State Film Awards Committee, 2003-04
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada