ಅಮಿತಾಭ್ ಬಚ್ಚನ್‌ಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವ
ಮುಂಬಯಿ : ನಟ ‘ಲೀಜನ್ ಡಿ’ಆನರ್’(ಲೀಜನ್ ಆಫ್ ಆನರ್) ಶುಕ್ರವಾರ ಪ್ರಾಪ್ತವಾಗಿದೆ.
ಫ್ರಾನ್ಸ್ ತನ್ನ ಪ್ರಜೆಗಳಿಗೆ ಹಾಗೂ ವಿದೇಶದವರಿಗೆ ನೀಡುವ ಅತ್ಯುನ್ನತ ಗೌರವ ಇದಾಗಿದ್ದು, ಅಮಿತಾಭ್ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜೀವನಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫ್ರೆಂಚ್ ಸರ್ಕಾರ ನೀಡುವ ಈ ಪ್ರಶಸ್ತಿಯನ್ನು ಫ್ರೆಂಚ್ ರಾಯಭಾರಿ ಡೊಮಿನಿಕ್ ಜಿರಾರ್ಡ್ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿ 1802ರಲ್ಲಿ ನೆಪೋಲಿಯನ್ ಬೋನಪಾರ್ಟೆಯಿಂದ ಸ್ಥಾಪಿತವಾಗಿದೆ.
ಇತರ ಪ್ರಮುಖರು : ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಸತ್ಯಜಿತ್ ರೇ, ಸಿತಾರ್ ವಾದಕ ರವಿಶಂಕರ್, ಖ್ಯಾತ ವಿಜ್ಞಾನಿ-ಕನ್ನಡಿಗ ಸಿಎನ್‌ಆರ್ ರಾವ್ ಮೊದಲಾದ ಭಾರತೀಯರು ಈಗಾಗಲೇ ಈ ಗೌರವ ಪಡೆದಿದ್ದಾರೆ.
(ಯುಎನ್‌ಐ)


Click it and Unblock the Notifications