»   » ಎಚ್‌.ಟಿ. ಸಾಂಗ್ಲಿಯಾನ ಮತ್ತೆ ಪೊಲೀಸ್‌ ಆಯುಕ್ತ!?

ಎಚ್‌.ಟಿ. ಸಾಂಗ್ಲಿಯಾನ ಮತ್ತೆ ಪೊಲೀಸ್‌ ಆಯುಕ್ತ!?

Subscribe to Filmibeat Kannada


ಪೊಲೀಸ್‌ ಆಯುಕ್ತರಾಗಿ ಎಚ್‌.ಟಿ.ಸಾಂಗ್ಲಿಯಾನ ಮತ್ತೆ ಕಾರ್ಯನಿರ್ವಹಿಸಲಿದ್ದಾರೆ! ಆದರೆ, ನಿಜ ಬದುಕಿನಲ್ಲಲ್ಲ... ಕೇವಲ ಸಿನಿಮಾದಲ್ಲಿ!

ಹಾಲಿ ಸಂಸದ ಮತ್ತು ಬೆಂಗಳೂರಿನ ಮಾಜಿ ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನ, ಶಿವರಾಜ್‌ಕುಮಾರ್‌ ಅಭಿನಯದ ‘ಸಂತ’ ಸಿನಿಮಾಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಭೂಗತ ಲೋಕದ ದೊರೆ ಸಂತೋಷ್‌ ಬದುಕಿನ ಕತೆ ಚಿತ್ರದಲ್ಲಿದೆ.

ಆರ್‌.ಶ್ರೀನಿವಾಸ್‌ ಮತ್ತು ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಈ ಚಿತ್ರದಲ್ಲಿ, ಅರತಿ ಛಾಬ್ರಿಯಾ, ಶ್ರೀದೇವಿಕಾ ಪ್ರಮುಖ ಪಾತ್ರದಲ್ಲಿದ್ದಾರೆ. ಮುರಳೀಧರ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮುಂಬೈ, ದೆಹಲಿ, ಚಿತ್ರದುರ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ.

ಸಾಂಗ್ಲಿಯಾನ ಮೊದಲ ಬಾರಿಗೆ ‘ಸಂತ’ ಚಿತ್ರದ ಮೂಲಕ, ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಆದರೆ ಅವರ ಮತ್ತು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ನಂಟಿದೆ. 1980ರ ಸುಮಾರಿನಲ್ಲಿ ‘ಸಾಂಗ್ಲಿಯಾನ’ ಹೆಸರಲ್ಲಿ ಎರಡು ಚಿತ್ರಗಳು ಹೊರಬಂದಿದ್ದವು. ಶಂಕರ್‌ನಾಗ್‌ ಆ ಚಿತ್ರಗಳ ನಾಯಕರಾಗಿದ್ದರು. ನಂತರ ದೇವರಾಜ್‌ ನಾಯಕರಾಗಿದ್ದ ‘ಸಾಂಗ್ಲಿಯಾನ-ಭಾಗ 3’ ಪ್ರೇಕ್ಷಕರ ಮನಸ್ಸಲ್ಲಿ ಇನ್ನೂ ನೆನಪಾಗಿ ಉಳಿದಿದೆ.

(ದಟ್ಸ್‌ ಕನ್ನಡ ಸಿನಿಡೆಸ್ಕ್‌)

Please Wait while comments are loading...