»   » ‘ಬ್ಲಾಕ್‌ ಮೇಲ್‌’ ಎಂಬ ಇಂಗ್ಲಿಷ್‌ ಹೆಸರಿನ ಕನ್ನಡ ಚಿತ್ರದ ಮುಹೂರ್ತಕ್ಕೆ ಹೃತಿಕ್‌ ರೋಷನ್‌ ಚಾಲನೆ ಕೊಡಲಿದ್ದಾರೆ !

‘ಬ್ಲಾಕ್‌ ಮೇಲ್‌’ ಎಂಬ ಇಂಗ್ಲಿಷ್‌ ಹೆಸರಿನ ಕನ್ನಡ ಚಿತ್ರದ ಮುಹೂರ್ತಕ್ಕೆ ಹೃತಿಕ್‌ ರೋಷನ್‌ ಚಾಲನೆ ಕೊಡಲಿದ್ದಾರೆ !

Posted By:
Subscribe to Filmibeat Kannada

ಲತಾ ಮಂಗೇಶ್ಕರ್‌, ಆಶಾ ಭೋಂಸ್ಲೆ ಮತ್ತು ಲಕ್ಕಿ ಆಲಿ- ಈ ಮೂವರೂ ಒಂದೇ ಕನ್ನಡ ಸಿನಿಮಾದಲ್ಲಿ ಹಾಡಿದರೆ ಹೇಗಿರುತ್ತೆ?
ಅಂದುಕೊಂಡಂತೆ ಎಲ್ಲಾ ಸಾಗಿದರೆ ‘ಬ್ಲಾಕ್‌ ಮೇಲ್‌’ ಎಂಬ ಇನ್ನೂ ಸೆಟ್ಟೇರದ ಕನ್ನಡ ಚಿತ್ರದಲ್ಲಿ ಈ ಮೂವರ ಕಂಠದ ಹಾಡುಗಳು ಮೂಡಲಿವೆ.

ಡ್ರೀಮ್‌ ಲ್ಯಾಂಡ್‌ ಪಿಕ್ಚರ್ಸ್‌ ಸ್ಕಿೃಪ್ಟೊಂದನ್ನು ಮುಂದಿಟ್ಟುಕೊಂಡು ಸಾಕಷ್ಟು ಹೊಸತುಗಳನ್ನು ಹೆಣೆಯುತ್ತಿದೆ. ಮೂಹೂರ್ತದಿಂದ ಹಿಡಿದು ಸಿನಿಮಾ ಬಿಡುಗಡೆವರೆಗೆ ಸಪ್ರೆೃಸ್‌ ಕೊಡುವುದು ಡ್ರೀಮ್‌ ಲ್ಯಾಂಡ್‌ ತಂಡದ ಕನಸು. ಕನ್ನಡ ಚಿತ್ರದ ಸಾಕಷ್ಟು ಕೆಲಸಕ್ಕೆ ಬಾಲಿವುಡ್‌ ಮೆರುಗು ಕೊಡಲು ಹೊರಟಿರುವ ಡ್ರೀಮ್‌ ತಂಡ, ಹೃತಿಕ್‌ ರೋಷನ್‌ ಕೈಲಿ ಮುಹೂರ್ತಕ್ಕೆ ಚಾಲನೆ ಕೊಡಿಸಲು ನಿರ್ಧರಿಸಿದೆ. ಅಂದಹಾಗೆ, ಈ ಚಿತ್ರದ ಸಂಗೀತ ಸಂಯೋಜನೆ ಮಾಡುತ್ತಿರುವವರು ಶ್ರೀಶೈಲ ಎಂಬ ಹೆಣ್ಣು ಮಗಳು.

ಈ ಹಿಂದೆ ‘ಪರ್ವ’ ಚಿತ್ರಕ್ಕೆ ಲತಾ ಕೈಲಿ ಹಾಗೂ ‘ಎಚ್‌ಟುಓ’ ಚಿತ್ರಕ್ಕೆ ಆಶಾ ಭೋಂಸ್ಲೆ ಕೈಲಿ ಹಾಡಿಸುವ ಹಂಸಲೇಖ ಹಾಗೂ ಸಾಧುಕೋಕಿಲಾ ಪ್ರಯತ್ನ ಕೈಗೂಡದ ಉದಾಹರಣೆಯಿದೆ. ಆದರೀಗ ಅದನ್ನು ಸಾಧಿಸೇ ತೀರುವೆ ಎಂಬ ಛಲ ಶ್ರೀಶೈಲ ಅವರದ್ದು. ಆಲ್‌ ದಿ ಬೆಸ್ಟ್‌ ಶ್ರೀಶೈಲ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada