»   » ಪ್ರೇಮ್ 'ಪ್ರೀತಿ..' ಸೈಡಿಗೆ; ಲವಕುಶ ಬೆಳ್ಳಿತೆರೆಗೆ

ಪ್ರೇಮ್ 'ಪ್ರೀತಿ..' ಸೈಡಿಗೆ; ಲವಕುಶ ಬೆಳ್ಳಿತೆರೆಗೆ

Subscribe to Filmibeat Kannada


ಒಂದು ಅನಾರೋಗ್ಯಕರ ಘರ್ಷಣೆ ತಪ್ಪಿದಂತಾಗಿದೆ! ಜೋಗಿ ಪ್ರೇಮ್ ನಟನೆ ಮತ್ತು ನಿರ್ದೇಶನದ'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಆ ಪರಿಣಾಮ ಶುಕ್ರವಾರ(ಡಿ.14) ತೆರೆಕಾಣುತ್ತಿರುವ 'ಲವಕುಶ'ಚಿತ್ರಕ್ಕೆ ಪೈಪೋಟಿ ಸ್ವಲ್ಪ ಕಡಿಮೆಯಾಗಿದೆ. ಈ ಎರಡೂ ದೊಡ್ಡ ಬಜೆಟ್ ಚಿತ್ರಗಳು ಒಂದೇ ದಿನ ಬಿಡುಗಡೆಗೆ ದಿನಾಂಕ ಪ್ರಕಟಿಸಿದ್ದವು. ಚಿತ್ರದ ಗ್ರಾಫಿಕ್ ಮತ್ತು ಸೆನ್ಸಾರ್ ಮಂಡಳಿ ಅನುಮೋದನೆ ಮತ್ತಿತರ ಕೆಲಸಗಳಿಂದಾಗಿ 'ಪ್ರೀತಿ ಏಕೆ ಭೂಮಿ ಮೇಲಿದೆ'ಡಿಸೆಂಬರ್ ಕೊನೆ ವಾರ ಬಿಡುಗಡೆಯಾಗಲಿದೆ.

ನಾಲ್ಕು ವರ್ಷಗಳ ನಂತರ ಶಿವರಾಜ್ ಕುಮಾರ್, ಉಪೇಂದ್ರ ಜೋಡಿ ಮತ್ತೆ ಒಂದಾಗಿದೆ. ಈ ಜೋಡಿ ಮೋಡಿ ಮಾಡುವುದೇ ಎಂಬ ಕುತೂಹಲ ಹುಟ್ಟಿಸಿರುವ 'ಲವಕುಶ'ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ. ಈ ಜೋಡಿಯ ಓಂ ಮತ್ತು ಪ್ರೀತ್ಸೆ ಯಶಸ್ಸು ಕುತೂಹಲಕ್ಕೆ ಕಾರಣ. ಚಿತ್ರದ ಆಫಲ್ ಹಾಡು ಕೇಳಿದವರಿಗೆ, ಚಿತ್ರದ ಸದಭಿರುಚಿ ಬಗ್ಗೆ ಅನುಮಾನ. ಚಿತ್ರದ ನಾಯಕಿಯರು; ಜೆನ್ನಿಫರ್ ಕೊತ್ವಾಲ್ ಮತ್ತು ಚಾರ್ಮಿ.

ನಿರ್ಮಾಪಕ ಕೆ.ಪ್ರಭಾಕರ್ ತಮ್ಮ ವೃತ್ತಿ ಜೀವನದಲ್ಲಿ ಎಂದೂ ಸೋತಿದ್ದೇ ಇಲ್ಲ. 6ಕೋಟಿ ಸುರಿದು ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ನಿರ್ದೇಶಕ ರೀಮೇಕ್ ಕಿಂಗ್ ಸಾಯಿ ಪ್ರಕಾಶ್. ಗುರುಕಿರಣ್ 6ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ನಟ ಮೋಹನ್ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ಹೀಗಾಗಿ ಇದು ಇನ್ನೊಂದು ರೀಮೇಕ್ ಅಲ್ಲವೆಂದು ನಿಟ್ಟುಸಿರುಬಿಡಬಹುದು.

ಇದೇ ಶುಕ್ರವಾರ(ಡಿ.14) ಕಾಶೀನಾಥ್ ಅವರ ಅಪ್ಪಚ್ಚಿ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಅಪ್ಪಚ್ಚಿಯಾಗದಿದ್ದರೆ ಸಾಕು!

(ದಟ್ಸ್ ಕನ್ನಡ ಸಿನಿವಾರ್ತೆ)

ಗ್ಯಾಲರಿ: ಪ್ರೀತಿ ಏಕೆ ಭೂಮಿ ಮೇಲಿದೆ | ಲವಕುಶ ವಾಲ್ ಪೇಪರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada