»   » ಪ್ರೇಮಾ ಅಲ್ಲ, ರಕ್ಷಿತಾ ಈಗ ‘ಹುಚ್ಚಿ’!!!

ಪ್ರೇಮಾ ಅಲ್ಲ, ರಕ್ಷಿತಾ ಈಗ ‘ಹುಚ್ಚಿ’!!!

Subscribe to Filmibeat Kannada

ಹುಚ್ಚಿ ಪಾತ್ರ ಮಾಡಬೇಕು ಎನ್ನುವ ಹಂಬಲ ಪ್ರೇಮಾ ಅವರಿಗಿದೆ. ಅದವರ ಗುರಿ! ಆದರೆ ಅಂತಹ ಅವಕಾಶ ರಕ್ಷಿತಾಗೆ ಒಲಿದಿದೆ!

ಊರ್ಮಿಳಾ ಮಂಡೋನ್ಕರ್‌ ಮುಖ್ಯ ಪಾತ್ರದಲ್ಲಿರುವ ‘ಪ್ಯಾರ್‌ ತುನೆ ಕ್ಯಾ ಕಿಯಾ’ ಹಿಂದಿ ಚಿತ್ರ, ಕನ್ನಡಕ್ಕೆ ‘ಹುಚ್ಚಿ’ ಹೆಸರಿನಲ್ಲಿ ರಿಮೇಕ್‌ ಆಗುತ್ತಿದೆ. ಊರ್ಮಿಳಾ ನಿರ್ವಹಿಸಿದ್ದ ಪಾತ್ರಕ್ಕೆ, ಗರಿಗರಿ ಚೆಲುವಿನ ಸುಂಟರಗಾಳಿ ಹುಡುಗಿ ರಕ್ಷಿತಾ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರೇಮದ ಸುಳಿಗೆ ಸಿಲುಕಿದ ಪ್ರಿಯತಮೆ(ಮಾನಸಿಕ ರೋಗಿ) ಪಾತ್ರವನ್ನು ರಕ್ಷಿತಾ ಒಪ್ಪಿದ್ದಾರೆ. ಈ ಮಧ್ಯೆ ರಕ್ಷಿತಾ ದಾಂಪತ್ಯ ಕಕ್ಷೆಗೆ ಬೀಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಪ್ರತಿಧ್ವನಿಸಿದೆ.

ಬೆಂಗಳೂರಿನ ಉದ್ಯಮಿಯಾಬ್ಬರ ಕೈಹಿಡಿದು, ಚಿತ್ರರಂಗಕ್ಕೆ ರಕ್ಷಿತಾ ವಿದಾಯ ಹೇಳುವ ಸುದ್ದಿ, ರಕ್ಷಿತಾ ಅಭಿಮಾನಿಗಳನ್ನು ಕಸಿವಿಸಿಗೊಳಿಸಿದೆ.

ರಕ್ಷಿತಾರ ಅಮ್ಮನೂ ಬಣ್ಣ ಹಚ್ಚುತ್ತಾರಂತೆ? :
ರಂಗಶಂಕರದಲ್ಲಿ ಅರುಂಧತಿ ನಾಗ್‌ರ ಸುತ್ತಾಮುತ್ತಾ ಸುತ್ತಾಡಿ, ‘ಜೋಗಿ’ ಚಿತ್ರದಲ್ಲಿ ಅಮ್ಮನ ಪಾತ್ರಕ್ಕೆ ಅವರನ್ನು ನಿರ್ದೇಶಕ ಪ್ರೇಮ್‌ ಒಪ್ಪಿಸಿದ್ದರು. ಈಗ ರಕ್ಷಿತಾ ಅವರ ತಾಯಿ ಮಮತಾರಾವ್‌ ಅವರನ್ನು ಪ್ರೇಮ್‌ ಒಪ್ಪಿಸಿದ್ದಾರೆ. ಆ ಮೂಲಕ ಕನ್ನಡಕ್ಕೆ ಮತ್ತೊಬ್ಬ ಅಮ್ಮ ಸಿಕ್ಕಿದಂತಾಗಿದೆ!

ಪ್ರೇಮ್‌ ನಿರ್ದೇಶನದ ‘ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರದಲ್ಲಿ ಮಮತಾ, ನಾಯಕನ ತಾಯಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada