For Quick Alerts
  ALLOW NOTIFICATIONS  
  For Daily Alerts

  ‘ವಿದ್ಯಾರ್ಥಿ’ ಕ್ಯಾಸೆಟ್‌ ಬಿಡುಗಡೆ : ಇದು ಸುಧೀರ್‌ ಪುತ್ರನ ಸಿನಿಮಾ!

  By Staff
  |

  ತಮ್ಮ ಮಕ್ಕಳನ್ನು ನಟರು ಚಿತ್ರರಂಗಕ್ಕೆ ತರುವುದು ಹೊಸ ಸಂಪ್ರದಾಯವೇನಲ್ಲ. ಇದೀಗ ಖ್ಯಾತ ಖಳನಟ ದಿ.ಸುಧೀರ್‌ ಅವರ ಪುತ್ರ ತರುಣ್‌ ಆಗಮನ. ಅವರ ‘ವಿದ್ಯಾರ್ಥಿ’ ಚಿತ್ರದ ಫಲಿತಾಂಶ, ಅವರ ಮುಂದಿನ ಚಿತ್ರಬದುಕನ್ನು ಅವಲಂಭಿಸಿದೆ! ಮೊನ್ನೆಯಷ್ಟೇ ಚಿತ್ರದ ಕ್ಯಾಸೆಟ್‌ ಬಿಡುಗಡೆಯಾಗಿದೆ.

  ತರುಣ್‌ ಸುಧೀರ್‌ ನಾಯಕರಾಗಿ ನಟಿಸಿರುವ ‘ವಿದ್ಯಾರ್ಥಿ’ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಯುವಕರಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಿರ್ದೇಶಕ-ನಟ ಪ್ರೇಮ್‌ ಸೇರಿದಂತೆ ಹಲವು ಯುವ ತಾರೆಗಳು ಜಮಾಯಿಸಿದ್ದರು.

  ಚಿತ್ರರಂಗದಲ್ಲಿ ಒಬ್ಬ ನಟನ ಚಿತ್ರದ ಯಾವುದೇ ಕಾರ್ಯಕ್ರಮಕ್ಕೆ ಇನ್ನೊಬ್ಬ ನಟ ಬರುವುದು ತೀರಾ ಅಪರೂಪ. ಬಹುಶಃ ಒಬ್ಬ ಇನ್ನೊಬ್ಬನ ವೈರಿ ಎಂದು ತಿಳಿದುಕೊಂಡಿಬಹುದೇನೋ? ಇದಂತೂ ಚಿತ್ರರಂಗದಲ್ಲಿ ನಡೆದುಕೊಂಡೇ ಬಂದಿದೆ. ಆದರೆ ಅಪರೂಪಕ್ಕೊಮ್ಮೆ, ಅಪವಾದವೆಂಬಂತೆ ಸ್ನೇಹಪರ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ‘ವಿದ್ಯಾರ್ಥಿ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಕೂಡ ಇಂತಹ ಅಪರೂಪದ ಕಾರ್ಯಕ್ರಮವೇ ಆಗಿತ್ತು.

  ನಾಯಕನಾಗಿ ಮೊದಲಬಾರಿಗೆ ನಟಿಸುತ್ತಿರುವ ತರುಣ್‌ ಅಂದು ಭಾವುಕವಾಗಿದ್ದರು. ಸಭೆಯಲ್ಲಿ ಮಾತನಾಡುತ್ತಾ, ತಮ್ಮ ತಂದೆ ನಟ ಸುಧೀರ್‌ ಅವರನ್ನು ನೆನಪಿಸಿಕೊಂಡರು. ಕಾರ್ಯಕ್ರಮಕ್ಕೆ ಬಂದು ತಮಗೆ ಶುಭಹಾರೈಸಿದ ಉದ್ಯಮದ ಗೆಳೆಯರೆಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

  ಈ ಚಿತ್ರದ ಮೂಲಕ ಚಿತ್ರ ಸಾಹಿತಿಯಾಗಿ ಪರಿಚಯವಾಗಿರುವ ಕನ್ನಡಶಿವು, ಸಂಗೀತ ನಿರ್ದೇಶಕ ಆರ್‌.ಪಿ.ಪಟ್ನಾಯಕ್‌, ನಿರ್ದೇಶಕ ಚಂದ್ರ ಹಾಗೂ ನಿರ್ಮಾಪಕ ನಾಯ್ಡು ಅವರಿಗೆ ಕೃತಜ್ಞತೆ ಸಲ್ಲಿಸಿದರು.

  ಆನಂದ್‌ ಆಡಿಯೋ ಮಾಲೀಕ ಮೋಹನ್‌ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಮಿಡಿ ಟೈಮ್‌ ಗಣೇಶ್‌, ಶರಣ್‌ ಮೊದಲಾದವರು ಮಾತನಾಡಿ ಚಿತ್ರಕ್ಕೆ ಹಾಗೂ ಕಲಾವಿದರಿಗೆ ಶುಭಕೋರಿದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X