Don't Miss!
- Lifestyle
ಡೋನರ್ನಿಂದ ಪಡೆದ ಅಂಡಾಣುವಿನಿಂದ ಗರ್ಭಧಾರಣೆ: ನೀವು ತಿಳಿಯಲೇಬೇಕಾದ ಸಂಗತಿಗಳಿವು
- Finance
LIC Scheme: ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
- News
ಮಂಗಳೂರಿನಲ್ಲಿ ಜನವರಿ 27ರಿಂದ ಮತ್ಸ್ಯ ಮೇಳ, ಇಲ್ಲಿದೆ ವಿವರ
- Automobiles
ಮುಂಬರಲಿರುವ ಟಾಪ್ 5 ಟಾಟಾ ಕಾರುಗಳು: ಎಂತಹ ವೈಶಿಷ್ಟ್ಯಗಳಿವೆ ಗೊತ್ತಾ?
- Technology
ಗಾರ್ಮಿನ್ ಕಂಪೆನಿಯ ಎರಡು ಸ್ಮಾರ್ಟ್ವಾಚ್ಗಳು ಅನಾವರಣ; ಬೆಲೆಗೆ ತಕ್ಕ ಫೀಚರ್ಸ್!
- Sports
IND vs NZ: ಏಕದಿನ ಕ್ರಿಕೆಟ್ನಲ್ಲಿ ಈತನಿಗೆ ಇನ್ನೂ ಅವಕಾಶ ನೀಡಬೇಕಿದೆ; ವಾಸಿಂ ಜಾಫರ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
13ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ; 27 ಚಿತ್ರಗಳಿಗೆ ಪ್ರಶಸ್ತಿ ಪ್ರದಾನ!
13ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯಗೊಂಡಿದೆ. ಮಾರ್ಚ್ 10ರಂದು ಗುರುವಾರ ಅಂತ್ಯಗೊಂಡಿದ್ದು, ಚಿತ್ರಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಒಟ್ಟು 27 ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಕನ್ನಡ, ಏಷ್ಯಾ, ಇಂಡಿಯಾ ಎಂಬ ಮೂರು ವಿಭಾಗಗಳಿದ್ದವು.
ಕನ್ನಡ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ 'ಪಿಂಕಿ ಎಲ್ಲಿ' ಚಿತ್ರ. ದ್ವಿತೀಯ ಅತ್ಯುತ್ತಮ ಚಿತ್ರವಾಗಿದೆ 'ದಾರಿ ಯಾವುದಯ್ಯ ವೈಕುಂಠಕ್ಕೆ', ಹಾಗೂ 'ಓ ನನ್ನ ಚೇತನ' ಚಿತ್ರ ಮೂರನೇ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂರು ಕನ್ನಡ ಚಿತ್ರಗಳು ಕನ್ನಡ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿವೆ.
13ನೇ
ಬೆಂಗಳೂರು
ಅಂತಾರಾಷ್ಟ್ರೀಯ
ಚಲನಚಿತ್ರೋತ್ಸವಕ್ಕೆ
ಚಾಲನೆ!
'ಪಿಂಕಿ ಎಲ್ಲಿ' ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿದ್ದು, ಕೃಷ್ಣೇಗೌಡ ಬಂಡವಾಳ ಹೂಡಿದ್ದಾರೆ. 'ದಾರಿ ಯಾವುದಯ್ಯ ವೈಕುಂಠಕ್ಕೆ' ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಆಕ್ಷನ್ ಕಟ್ ಕೇಳಿದ್ದು, ಶ್ರೀ ಬಸವೇಶ್ವರ ಕ್ರಿಯೇಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಅಗಿದೆ.
'ಓ ನನ್ನ ಚೇತನ' ಚಿತ್ರಕ್ಕೆ ಅಪೂರ್ವ ಆಕ್ಷನ್ ಕಟ್ ಹೇಳಿದ್ದು ಸಂತೋಷ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಮತ್ತು ನಿರ್ದೇಶಕರನ್ನು ಗೌರವಿಸಲಾಯಿತು. ಇನ್ನು ಜೂರಿ ಪ್ರಶಸ್ತಿಗೂ ಕನ್ನಡ ಚಿತ್ರ ಭಾಜನವಾಗಿವೆ. ಅಮರ್ ಗೌಡ ನಿರ್ದೇಶನದ 'ಮಸಣದ ಹೂವು' ಚಿತ್ರ ಈ ಪ್ರಶಸ್ತಿಯನ್ನು ಪಡೆದಿದೆ.
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಪ್ರಥಮ ಸ್ಥಾನ ಪಡೆದುಕೊಂಡಿದೆ 'ದೊಡ್ಡಹಟ್ಟಿ ಬೋರೇಗೌಡ'. ನಿರ್ದೇಶನ ರಘು ಕೆ.ಎಂ. ಮತ್ತು ನಿರ್ಮಾಣ ಮಾಡಿದ್ದಾರೆ. ಲೋಕೇಶ್ ಕೆ.ಎಂ. 2ನೇ ಅತ್ಯುತ್ತಮ ಚಿತ್ರ 'ದಂಡಿ' ಈ ಚಿತ್ರವನ್ನು ವಿಶಾಲ್ ರಾಜ್ ನಿರ್ದೇಶನ ಮಾಡಿದ್ದಾರೆ. ಹಾಗೂ 3ನೇ ಅತ್ಯುತ್ತಮ ಚಿತ್ರವಾಗಿದೆ 'ದೇವುಡ ಕಾಡ್' ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಅಮರ್ ಎಲ್.
ಕನ್ನಡ ಸಿನಿಮಾ ಸ್ಪರ್ಧೆ ಜೂರಿ ವಿಭಾಗದಲ್ಲಿ ಕೇಕ್ ಮತ್ತು ದಿಯಾ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿದೆ. ಇನ್ನು ಜನಪ್ರಿಯ ಮನರಂಜನಾ ಚಿತ್ರವಾಗಿ 2ನೇ ಪ್ರಶಸ್ತಿ 'ಶಿವಾಜಿ ಸೂರತ್ಕಲ್' ಚಿತ್ರಕ್ಕೆ ಸಿಕ್ಕಿದೆ. ಈ ಚಿತ್ರಕ್ಕೆ ಆಕಾಶ್ ಶ್ರೀವಾತ್ಸ ನಿರ್ದೇಶನವಿದೆ. ಮೂರನೇ ಅತ್ಯುತ್ತಮ ಚಿತ್ರ ಆಗಿ ಪ್ರಶಸ್ತಿ ಪಡೆದಿದೆ 'ಲವ್ ಮಾಕ್ ಟೈಲ್' ಸಿನಿಮಾ. ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
2021ನೇ ಸಾಲಿನ ಜನಪ್ರಿಯ ಚಿತ್ರವಾಗಿ ಮೊದಲ ಪ್ರಶಸ್ತಿ ದಕ್ಕಿಸಿಕೊಂಡಿದೆ. 'ಯುವರತ್ನ' ಪುನೀತ್ ರಾಜ್‌ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದೆ. ಇದೇ ಸಾಲಿನಲ್ಲಿ 2ನೇ ಅತ್ಯುತ್ತಮ ಜನಪ್ರಿಯ ಚಿತ್ರವಾಗಿದೆ 'ರಾಬರ್ಟ್'. 3ನೇ ಅತ್ಯುತ್ತಮ ಚಿತ್ರ 'ಕೋಟಿಗೊಬ್ಬ-3'. ಹಾಗೆ ಜ್ಯೂರಿ ಪ್ರಶಸ್ತಿಗೆ ಭಾಜವಾಗಿದೆ 'ಪೊಗರು'. ಕನ್ನಡದ ಈ ಚಿತ್ರಗಳು ಸೇರಿದಂತೆ ಹಲವು ಭಾಷೆಗಳ ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಪದಾನ ಮಾಡಲಾಯಿತು.