ನಟ ಯಶ್ ವಿರುದ್ಧ ಕೋಟಿ ರು. ಸಂಭಾವನೆ ಆರೋಪ

ಇದಕ್ಕೆಲ್ಲಾ ತೀರಾ ತಲೆ ಕೆಡಿಸಿಕೊಂಡು ಸ್ಪಷ್ಟನೆಗಳನ್ನು ನೀಡುತ್ತಾ ಹೋಗುವ ಜಾಯಮಾನ ಯಶ್ ದಲ್ಲ. ಹೇಳುವ ಒಂದೆರಡು ಮಾತುಗಳಲ್ಲೇ ಹೇಳಬೇಕಾದುದನ್ನು ಹೇಳಿದ್ದಾರೆ. "ನಾನು ಹಣಕ್ಕಾಗಿ ಜೀವ ಬಿಡೋ ಪಾರ್ಟಿಯಲ್ಲ. ನನ್ನ ಮಿತಿಯನ್ನು ಮೀರಿದ ಸಂಭಾವನೆ ಕೇಳುತ್ತಿಲ್ಲ. ಕೋಟಿ ಕೋಟಿ ಸಂಭಾವನೆ ವದಂತಿಗಳು ಮಾತ್ರ.
ಕೋಟಿ ಬೇಡಿಕೆಯನ್ನು ಇಡುವಷ್ಟು ಮೂರ್ಖ ನಾನಲ್ಲ. ನನ್ನ ಯೋಗ್ಯತೆಗೆ ತಕ್ಕ ಸಂಭಾವನೆ ಪಡೆಯುತ್ತಿದ್ದೇನೆ. ಪ್ರೇಕ್ಷಕರನ್ನು ಸೆಳೆಯಲು ಎಷ್ಟು ಶಕ್ತನಾಗಿದ್ದೇನೆ ಎಂಬುದರ ಮೇಲೆ ನಿರ್ಮಾಪಕರು ಸಂಭಾವನೆ ನೀಡುತ್ತಾರೆ ಎನ್ನುವ ಯಶ್, ತಾನು ಯಾವತ್ತೂ ಹಣವೊಂದನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದನವನಲ್ಲ" ಎಂದು ಹೇಳಿ ಅವರ ವಿರುದ್ಧದ ಸುದ್ದಿಗೆ ಝಾಡಿಸಿದ್ದಾರೆ.
English summary
Moggina Manassu fame kannada actor Yash, is suffering from Remuneration rumour in Sandalwood. He told there is no truth in this rumour.


Click it and Unblock the Notifications