For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಮಾತು ಅದೆಷ್ಟೋ ನಟಿಯರಿಗೆ ಪಾಠ

  |

  ಮಂಗಳೂರು ಮೂಲದ ಕನ್ನಡ ನಟಿ ಅನುಷ್ಕಾ ಶೆಟ್ಟಿ ಹೆಸರು ದಕ್ಷಿಣ ಭಾರತದಲ್ಲಿ ಚಿರಪರಿಚಿತ. ತೆಲುಗು ಚಿತ್ರ ಅರುಂಧತಿ ಮೂಲಕ ಏಕಾಏಕೀ ಸ್ಟಾರ್ ಪಟ್ಟ ಗಿಟ್ಟಿಸಿದ ಅನುಷ್ಕಾ ಶೆಟ್ಟಿ ನಂತರ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಿದ್ದು ಆಕೆಯ ಸಾಮರ್ಥ್ಯವನ್ನು ಜಾಹೀರುಪಡಿಸಿದೆ.

  ಇಂತಹ ಅನುಷ್ಕಾ ಶೆಟ್ಟಿ "ನಾನು ಸ್ಟಾರ್ ಎಂದು ಯಾವತ್ತೂ ತಿಳಿದುಕೊಂಡಿಲ್ಲ. ಹಾಗೇನಾದರೂ ತಿಳಿದರೆ ನನ್ನಷ್ಟು ಮೂರ್ಖಳು ಬೇರಾರೂ ಇಲ್ಲ..."ಎಂದಿದ್ದಾರೆ. ಅಷ್ಟಕ್ಕೇ ನಿಲ್ಲದ ಆಕೆ, "ನಾನು ಮಾಡೆಲ್ ಆಗಿದ್ದೆ, ನಂಗೆ ನಟನೆ ಗೊತ್ತಿರಲಿಲ್ಲ. ಅರುಂಧತಿಯಲ್ಲಿ ನಿರ್ದೆಶಕರು ಹೇಳಿಕೊಟ್ಟಿದ್ದನ್ನು ಮಾಡಿ ಸ್ಟಾರ್ ಆದೆ. ಅಂದಿನಿಂದ ನಿರ್ದೆಶಕರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತೇನೆ.

  ಈ ಕಾರಣದಿಂದಲೇ ನಾನು ಇನ್ನೂ ಚಿತ್ರರಂಗದಲ್ಲಿ ಉಳಿದುಕೊಂಡಿದ್ದೇನೆ. ಪ್ರತಿದಿನ ಬೆಳಿಗ್ಗೆ ಎದ್ದು ನಾನು ಒಂದು ಮಗುವಿನಂತೆ ಸೆಟ್ ಗೆ ಹೋಗುತ್ತೇನೆ. ಅಲ್ಲಿ ನಿರ್ದೆಶಕರು ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ. ಸಿನಿಮಾಗೆ ಏನು ಬೇಕು ಎಂಬುದು ನಿರ್ದೇಶಕರಿಗೆ ಗೊತ್ತಿರುತ್ತದೆ. ಅವರು ಹೇಳಿದ್ದನ್ನು ಮಾಡಿದರೆ ಜನ ನಮ್ಮ ಪಾತ್ರವನ್ನು ಮೆಚ್ಚುತ್ತಾರೆ.

  ಆ ಮೂಲಕ ನಮಗೆ ಹೆಸರು, ಪ್ರಸಿದ್ಧಿ ಬರುತ್ತದೆ. ಅದನ್ನು ಬಿಟ್ಟು ನಾವಿ ಸ್ಟಾರ್ ಗಿರಿ ತೋರಿಸಲು ಹೋದರೆ ಜನರು ನಮ್ಮನ್ನು ಬೇಗನೆ ಮನೆಗೆ ಕಳಿಸುತ್ತಾರೆ" ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಈ ಮಾತುಗಳು ಅದೆಷ್ಟೋ ನಟಿಯರಿಗೆ ಪಾಠ ಆಗಬಹುದು. ಇಲ್ಲದಿದ್ದರೆ ಬೇಗ ಮನೆ ಸೇರಿಕೊಳ್ಳಬಹುದು, ಎನಂತೀರ? (ಒನ್ ಇಂಡಿಯಾ ಕನ್ನಡ)

  English summary
  Actress Arundhati move fame Anushka Setty told her Professional Secret.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X