»   » ಗೂಗಲ್ ಹುಡುಕಾಟ: ನಮಿತಾ ಟಾಪ್ ಸ್ಥಾನ

ಗೂಗಲ್ ಹುಡುಕಾಟ: ನಮಿತಾ ಟಾಪ್ ಸ್ಥಾನ

Subscribe to Filmibeat Kannada
Namitha beats google in'Top searches on Mobile' list
ದಕ್ಷಿಣ ಭಾರತದ ಹಾಟ್ ಹುಡುಗಿ ನಮಿತಾ ನಟನೆಗಿಂತ ಬೇರೆಲ್ಲ ವಿಷಯಕ್ಕೆ ಹೆಸರುವಾಸಿ ಆಗಿದ್ದೇ ಹೆಚ್ಚು. ಇತ್ತೀಚೆಗೆ ಗೂಗಲ್ ನಡೆಸಿದ ಸಮೀಕ್ಷೆ ಪ್ರಕಾರ ಅತಿ ಹೆಚ್ಚು ಬಳಕೆಯಲ್ಲಿರುವ ಹುಡುಕುಪದ(key word)ಗಳಲ್ಲಿ ಕತ್ರಿನಾ ಕೈಫ್ ಹೆಚ್ಚು ಬಳಕೆಯಾಗಿದ್ದು, ನಂತರದ ಸ್ಥಾನ ನಮಿತಾಗೆ ಸಲ್ಲುತ್ತದೆ. ಇದೇ ಸಮೀಕ್ಷೆಯನ್ನು ಮೊಬೈಲ್ ಬಳಕೆದಾರರ ಮೇಲೂ ಪ್ರಯೋಗಿಸಿ ನೋಡಿದ ಮೇಲೂ ಕೂಡ ನಮಿತಾ ಟಾಪ್ ಸ್ಥಾನ ಉಳಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ಬಿಟ್ಟರೆ ನಮಿತಾ ಪದ ಹುಡುಕಾಟದಲ್ಲಿ ಮುಂದಿದೆ.

ಕನ್ನಡದ ನೀಲಕಂಠ ಚಿತ್ರ ಸೇರಿದಂತೆ ಸುಮಾರು 30 ನಟಿಸಿರುವ ನಮಿತಾ ಅವರ ಹೆಸರಲ್ಲಿ 2500ಕ್ಕೂ ಹೆಚ್ಚು ಅಭಿಮಾನಿ ಸಂಘಗಳಿವೆ. ಚಿತ್ರಗಳಲ್ಲಿ ತುಂಡು ಬಟ್ಟೆ ಉಟ್ಟು ಬೆಚ್ಚಿಬೀಳಿಸುವ ನಮಿತಾ ತಮಿಳಿನ ಕಲೈಗರ್ ಟಿವಿ ಕಾರ್ಯಕ್ರಮವೊಂದರಲ್ಲಿ ಸೆಲ್ವಾರ್ ಕಮೀಜ್ ಧರಿಸಿ ಸಭ್ಯವಾಗಿ ಕಾಣಿಸಿಕೊಂಡಿದ್ದು ಇದೆ. ನಮಿತಾ ಆಗಮನದಿಂದ ಕಲೈಗರ್ ಟಿವಿಯ ಟಿಆರ್ ಪಿ ರೇಟಿಂಗ್ ಗಗನಕ್ಕೇರಿದ್ದು ಸುಳ್ಳಲ್ಲ.

ಪ್ರಸಕ್ತ ವರ್ಷದಲ್ಲಿ ಬಂದ ಕೋಟ್ಯಾಂತರ ಸರ್ಚ್ ಕ್ವೈರಿ(ಹುಡುಕಾಟದ ಬೇಡಿಕೆ)ಗಳ ಆಧಾರದ ಮೇಲೆ ಯಾವ ಪದವನ್ನು ಅತಿ ಹೆಚ್ಚು ಬಾರಿ ಮೊಬೈಲ್ ಸರ್ಚ್ ಬಾಕ್ಸ್ ನಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಪಟ್ಟಿಯನ್ನು ತಯಾರಿಸಲಾಗಿದೆ ಎನ್ನುತ್ತಾರೆ ಗೂಗಲ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ವಿನಯ್ ಗೋಯಲ್

ಒಟ್ಟಾರೆ, ಮೊಬೈಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಪದಗಳ ಪಟ್ಟಿ

1. ಆರ್ಕುಟ್,
2.ಯಾಹೂ
3. ವ್ಯಾಪ್ ತಂತ್ರಗಳು (wap tricks)
4. ಜೀಮೇಲ್
5 . ಗೇಮ್ಸ್
6. ಕತ್ರೀನಾ ಕೈಫ್
7.ರೀಡೀಫ್ ಮೇಲ್
8. ಯಾಹೂ ಮೇಲ್
9. ನಮಿತಾ
10. ಗೂಗಲ್

ಸಿನಿಮಾ, ಮನರಂಜನೆ ಹಾಗೂ ಪ್ರವಾಸ ಕುರಿತಾದ ಮಾಹಿತಿಗೆ ಜನ ಸದಾ ಹಾತೊರೆಯುತ್ತಿರುತ್ತಾರೆ ಎಂದು ತಿಳಿದುಬಂದಿದೆ. ಕತ್ರಿನಾ ಕೈಫ್ ನಂತರದ ಸ್ಥಾನದಲ್ಲಿ ಮಹಾತ್ಮ ಗಾಂಧಿಜೀ, ಆರನೇ ವೇತನ ಆಯೋಗ, ಯೂಟೂಬ್, ಯಾಹೂ, ರೈಲ್ವೇ ಬುಕ್ಕಿಂಗ್ ಸೇರಿದೆ. ಸಚಿನ್, ಕ್ರಿಶ್ಚಿಯನ್ ರೋನಾಲ್ಡೊ, ಬೀಜಿಂಗ್ ಒಲಿಂಪಿಕ್ಸ್ 2008, ಕೂಡ ಹೆಚ್ಚು ಹುಡುಕಾಟದಲ್ಲಿದೆ. ಆದರೆ ಈ ವರ್ಷ ನಟಿ ಜೆನಿಲಿಯಾ ಡಿ'ಸೋಜಾ ಹೆಸರು ಪಟ್ಟಿಯಲ್ಲಿ ಸೇರಿರುವುದು ಅಚ್ಚರಿಯ ವಿಷಯವಾಗಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಪೂರಕ ಓದಿಗೆ: ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್! || ಜಾನ್ ಅಬ್ರಾಹಂ ಏಷ್ಯದ ನಂ.1 ಕಾಮ ಪುರುಷ
ಗ್ಯಾಲರಿ: ನಮಿತಾ || ಕತ್ರೀನಾ ಕೈಫ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada