ನಿಖಿತಾರಿಂದ ಕನ್ನಡಿಗರಿಗೆ ಸಂಕ್ರಾಂತಿ ಶುಭಾಶಯ
ನಾಯಕಿ ನಿಖಿತಾ ಈ ವರ್ಷದ ಸಂಕ್ರಾಂತಿ ಹಬ್ಬವನ್ನು ತುಂಬಾ ಖುಷಿಖುಷಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಾರಣ, ಕಳೆದ ವರ್ಷದಿಂದ ಆಕೆಯ ವೈಯಕ್ತಿಕ ಜೀವನದಲ್ಲಿ ವಿವಾದ ಜೊತೆಯಾದರೂ ವೃತ್ತಿಜೀವನ ಉತ್ತುಂಗದಲ್ಲಿದೆ. ಕಳೆದ ವರ್ಷ ಸಂಭವಿಸಿದ ಕಹಿ ಘಟನೆಗಳನ್ನೆಲ್ಲ ಮರೆತು ಹೊಸ ಜೀವನ, ಹೊಸ ಯಶಸ್ಸನ್ನು ನಿರೀಕ್ಷಿಸುತ್ತಿದ್ದಾರೆ ನಖಿತಾ.
ಈ ಕುರಿತು ನಿಖಿತಾ, "ಈ ವರ್ಷದ ಸಂಕ್ರಾಂತಿ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಸಮಸ್ತ ಜನರಿಗೂ ಒಳ್ಳೆಯದು ಮಾಡಲಿ. ಜೊತೆಗೆ ಇದು ಈ ವರ್ಷದ ಮೊದಲ ಹಬ್ಬ. ನನಗೆ ಹೊಸ ವರ್ಷ ಹೊಸ ಭರವಸೆ ಮೂಡಿಸಿದೆ. ಎಲ್ಲ ಜನರಿಗೂ ಈ ಹಬ್ಬ ಹೊಸ ಭರವಸೆ ಮೂಡಿಸಲಿ. ಜೀವನದಲ್ಲಿ ಹೊಸತನ ಕಾಣಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ" ಎಂದು ಹೃದಯತುಂಬಿ ಆಶಿಸಿದ್ದಾರೆ.
ನಿಖಿತಾ ನಾಯಕಿಯಾಗಿರುವ ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಚಿತ್ರ ಇತ್ತೀಚಿಗಷ್ಟೇ ಶೂಟಿಂಗ ಮುಗಿಸಿದೆ. ಇನ್ನೂ ಸಾಕಷ್ಟು ಕನ್ನಡ ಹಾಗೂ ಇತರ ಭಾಷೆಗಳ ಚಿತ್ರಗಳು ನಿಖಿತಾ ಕೈಯಲ್ಲಿವೆ. ಈ ವರ್ಷ ಕೂಡ ನಿಖಿತಾ ಪ್ರಯಾಣ ಯಶಸ್ವಿಯಾಗಿ ಸಾಗುವ ಸೂಚನೆಗಳು ದಟ್ಟವಾಗಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











