»   » ಶಿವಣ್ಣ ಚಿತ್ರಕ್ಕೆ ಅಂದರ್ ಆದ ಬಾಹರ್ ಬೆಡಗಿ ಪಾರ್ವತಿ

ಶಿವಣ್ಣ ಚಿತ್ರಕ್ಕೆ ಅಂದರ್ ಆದ ಬಾಹರ್ ಬೆಡಗಿ ಪಾರ್ವತಿ

Posted By:
Subscribe to Filmibeat Kannada

ಮಿಲನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಲೆಯಾಳಿ ಸುಂದರಿ ನಟಿ ಪಾರ್ವತಿ ಮೆನನ್ ಕನ್ನಡದಲ್ಲಿ ನಾಲ್ಕನೇ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಮೊದಲು ಅವರು ಮಿಲನ, ಪೃಥ್ವಿ, ಹಾಗೂ ಮಳೆ ಬರಲಿ ಮಂಜೂ ಇರಲಿ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅಂದರ್ ಬಾಹರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದ ಶೂಟಿಂಗ್ ಮೊನ್ನೆಯಷ್ಟೇ ಪ್ರಾರಂಭವಾಗಿದೆ.

ಕನ್ನಡದ ಅನೇಕ ನಿರ್ಮಾಪಕರು ಕೇರಳಕ್ಕೆ ನನ್ನ ಬಳಿ ಕಥೆ ಹೇಳಲು ಬಂದಿದ್ದರು. ಆದರೆ ಕಥೆ ಇಷ್ಟವಾಗದ ಕಾರಣ ನಾನು ಅವರ ಚಿತ್ರವನ್ನು ನಾನು ಒಪ್ಪಿಕೊಳ್ಳಲಿಲ್ಲ. ಆದರೆ ಕಥೆ ಹೇಳಲು ಬಂದುಹೋದ ಅವರೆಲ್ಲಾ ನಾನು ಅವರ ಚಿತ್ರದಲ್ಲಿ ನಟಿಸಲಿದ್ದೇನೆ ಎಂದು ಕರ್ನಾಟಕದದಲ್ಲಿ ಹೇಳಿಕೊಳ್ಳುತ್ತಾರೆ. ಇದು ಅನಾವಶ್ಯಕ ಗೊಂದಲಕ್ಕೆ ಕಾರಣವಾಗುತ್ತಿದೆ" ಎಂದಿದ್ದಾರೆ.

ಕಥೆ ಚೆನ್ನಾಗಿದ್ದು ನಟನೆಗೆ ಅವಕಾಶವಿರುವ ಚಿತ್ರವನ್ನು ಮಾತ್ರ ನಾನು ಒಪ್ಪಿಕೊಳ್ಳುವುದು. ಕೇಳಿದ ಕಥೆಯನ್ನೆಲ್ಲಾ ಸುಖಾಸುಮ್ಮನೆ ಒಪ್ಪಿಕೊಳ್ಳಲಾಗುವುದಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇನ್ನಾದರೂ ಪಾರ್ವತಿ ಮೆನನ್ ಬಳಿ ಹೋಗುವ ನಿರ್ಮಾಪಕರು, ನಿರ್ದೇಶಕರು ಹುಶಾರಾಗಿರುವುದು ಒಳ್ಳೆಯದು. ಏಕೆಂದರೆ ಆಕೆ ಒಪ್ಪದಿದ್ದರೆ ಕಥೆ ಚೆನ್ನಾಗಿಲ್ಲ ಎಂಬ ಸರ್ಟಿಫಿಕೇಟ್ ಸಿಕ್ಕು ಅವಾಂತರ ಆಗೋದು ಯಾಕೆ? (ಒನ್ ಇಂಡಿಯಾ ಕನ್ನಡ)

English summary
Actress Parvathi Menon acts in the movie Shivarajkumar's Andar Bahar. She told that she gives importance to story of the film.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada