ಬೆಳ್ಳಿ ಹೆಜ್ಜೆಯಲ್ಲಿ ಪ್ರತಿಮಾ ದೇವಿ ಬಂಗಾರದ ನೆನಪುಗಳು

By Rajendra

Actress Pratima Devi
ನಮ್ಮ ಕುಟುಂಬ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಒಡನಾಟ ಹೊಂದಿದ್ದು ನಂತರ ಡಿ.ಶಂಕರ್ ಸಿಂಗ್ ಅವರ ಬದುಕಿನ ಸಂಗಾತಿಯಾದ ಮೇಲೆ ಚಲನಚಿತ್ರರಂಗದೊಂದಿಗೆ ನಾನು ಸಕ್ರಿಯವಾಗಿ ತೊಡಗಿಕೊಳ್ಳಬೇಕಾಯಿತು ಎಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ ಅವರು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ಏರ್ಪಡಿಸಿದ್ದ ಮಾಸಿಕ ಕಾರ್ಯಕ್ರಮ ಬೆಳ್ಳಿ ಹೆಜ್ಜೆಯಲ್ಲಿ ಮಾತನಾಡುತ್ತಿದ್ದರು.ಮೊದಮೊದಲು ಮೈಸೂರಿನಲ್ಲಿ ಚಲನಚಿತ್ರ ಚಟುವಟಿಕೆಗಳು ಹೆಚ್ಚಾಗಿದ್ದವು. ನಮ್ಮ ಸಂಸ್ಥೆಯ ಬಹುತೇಕ ಎಲ್ಲಾ ಚಿತ್ರಗಳ ಚಿತ್ರೀಕರಣ ಹಾಗೂ ನಂತರದ ಕೆಲಸಗಳು ಮೊದಲು ಮೈಸೂರಿನಲ್ಲೇ ನಡೆದಿದ್ದವು ನಂತರ ಅವು ಮದ್ರಾಸ್-ಬೆಂಗಳೂರಿನಲ್ಲಿ ಆರಂಭಗೊಂಡವು ಎಂದು ಅವರು ಹಳಯ ನೆನಪುಗಳನ್ನು ಮೆಲುಕು ಹಾಕಿದರು.

ತಮ್ಮ ಇಡೀ ಕುಟುಂಬವೇ ಕನ್ನಡ ಚಿತ್ರರಂಗದದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ಮೂರು ತಲೆಮಾರುಗಳ ನಂತರವೂ ನಮ್ಮ ಕುಟುಂಬದ ಸದಸ್ಯರು ಕನ್ನಡ ಚಿತ್ರರಂಗದೊಂದಿಗೆ ಒಡನಾಡುತ್ತಿದ್ದಾರೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಬರಹ ಸಂಚಿಕೆಯನ್ನು ನಟಿ ಪ್ರತಿಮಾ ದೇವಿ ಅವರು ಬಿಡುಗಡೆಗೊಳಿಸಿದರು.

ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮೀ ಸಿಂಗ್, ನಟ ಜೈಜಗದೀಶ್ ಮೊದಲಾದವರು ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films senior actress Pratima Devi remembers her golden days on silver screen at Belli Hejje organized by Karnataka Chalanachitra Academy. She acted in Nagakanye, Jaganmohini, Srinivasa Kalyana, Muttidella Chinna and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X