»   » ಗಂಡಹೆಂಡತಿ ಖ್ಯಾತಿಯ ಸಂಜನಾ ಮತ್ತೆ ಗಾಂಧಿನಗರಕ್ಕೆ

ಗಂಡಹೆಂಡತಿ ಖ್ಯಾತಿಯ ಸಂಜನಾ ಮತ್ತೆ ಗಾಂಧಿನಗರಕ್ಕೆ

Subscribe to Filmibeat Kannada

ಸಂಜನಾ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಗಂಡ ಹೆಂಡತಿ ಚಿತ್ರ. ಹೌದು ಕಂಡ್ರೀ ಅದೇ ಸಂಜನಾ ಇದೀಗ ಕನ್ನಡ ಚಿತ್ರದಲ್ಲಿ ಸಕತ್ ಬಿಜಿ ಅಂತೆ. ಎರಡು ಮೂರು ಚಿತ್ರಗಳು ಕೈಯಲ್ಲಿವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಗಂಡಹೆಂಡತಿ ಎಂಬ ಹಾಟ್ ಚಿತ್ರದಲ್ಲಿ ನಟಿಸುವ ಮೂಲಕ ಬ್ರಾಂಡ್ ಆಗಿದ್ದ ಈ ನಟಿಯನ್ನು ಕನ್ನಡ ಚಿತ್ರರಂಗ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು.

ಇದರಿಂದ ಬೇಸತ್ತ ಸಂಜನಾ ತೆಲುಗಿ ನಡೆಗೆ ಮುಖ ಮಾಡಿದ್ದರು. ಅಲ್ಲಿ ಅವಕಾಶ ಗಿಟ್ಟಿಸಿಕೊಂಡ ಈಕೆ, ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶದ ಬುಜ್ಜಿಗಾಡು ಚಿತ್ರದಲ್ಲಿ ನಟಿಸಿದ ನಂತರ ಕನ್ನಡ ಮತ್ತು ತೆಲುಗಿನಲ್ಲಿ ಸಾಲುಸಾಲಾಗಿ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ಬಾಸ್ ಚಿತ್ರಕ್ಕೆ ಸಂಜನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಮಿತಾಬ್ ಬಚ್ಚನ್ ನಟಿಸಿರುವ ಖಾಕಿ ಎಂಬ ಹಿಂದಿ ಚಿತ್ರ ತೆಲುಗಿನಲ್ಲಿ ಡಬ್ಬ ಆಗುತ್ತಿದ್ದು, ಆ ಚಿತ್ರದಲ್ಲೂ ಈಕೆಗೆ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾಳೆ.

ಕಲಾವಿದರಿಗೆ ಗಡಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳುವ ಮಾತು. ಕನ್ನಡದಲ್ಲಿ ನಿರ್ಲಕ್ಷಕ್ಕೆ ಒಳಗಾದ ಸಂಜನಾ ಸೀದಾ ನಡೆದದ್ದು ತೆಲುಗು ಚಿತ್ರರಂಗಕ್ಕೆ. ತೆಲುಗು ಚಿತ್ರದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ನಿರ್ದೇಶನದ ಬುಜ್ಜಿಗಾಡು ಚಿತ್ರದಲ್ಲಿ ನಟಿಸಿ ತಾನೊಬ್ಬ ಉತ್ತಮ ನಟಿ ಎಂದು ನಿರೂಪಿಸಿದ್ದಾರೆ. ಬುಜ್ಜಿಗಾಡು ಚಿತ್ರ ಕೌಟುಂಬಿಕ ಹಿನ್ನಲೆಯ ಚಿತ್ರವಾದ್ದರಿಂದ ತೆಲುಗಿನ ಜನ ಸಂಜನಾ ಅವರನ್ನು ಮೆಚ್ಚಿದ್ದಾರೆ. ಸದ್ಯ ಅವರು ತೆಲುಗು ಚಿತ್ರರಂಗದಲ್ಲಿ ಅವರು ಸಕ್ರಿಯವಾಗಿದ್ದಾರೆ. ಈ ಮೂಲಕ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರತೊಡಗಿವೆ.

ಈ ಕುರಿತು ಮಾತನಾಡಿರುವ ಆಕೆ, ಇದೀಗ ಅವಕಾಶಗಳಿಗೆ ಏನು ಕೊರತೆ ಇಲ್ಲ. ತೆಲುಗಿನ ಬುಜ್ಜಿಗಾಡು ಚಿತ್ರದಲ್ಲಿ ನಟಿಸಿದ ನಂತರ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಮತ್ತೊಮ್ಮೆ ತಪ್ಪು ಮಾಡಬಾರದು ಎಂದು ಪಾತ್ರಗಳ ಆಯ್ಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿರುವೆ. ರಮೇಶ್ ಯಾದವ್ ನಿರ್ಮಾಣದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಾಸ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವೆ ಎಂದು ಮುಗುಳ್ನಕ್ಕ ಬೆಡಗಿ ಸಂಜನಾ, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ಪ್ರಥಮ ಹಂತದ ಚಿತ್ರೀಕರಣ ಆಗಸ್ಟ್ 6 ರಿಂದ ಸ್ವಿಜರ್ ಲ್ಯಾಂಡಿಗೆ ತೆರಳುವುದಾಗಿ ಹೇಳಿದರು. ರಘುರಾಜ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದರು.

ಬಾಲಾಜಿ ಸಿಂಗ್ ನಿರ್ಮಾಣದ ನಟ ಸುದೀಪ್ ಅಳಿಯ ಆರ್ಯ ನಾಯಕನಾಗಿ ನಟಿಸಲಿರುವ ಇನ್ನೊಂದು ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದು, ಇದರಲ್ಲಿ ನನ್ನದು ಹೋಮ್ಲಿ ಪಾತ್ರ. ಒರಟ ಐ ಲವ್ ಯೂ ಚಿತ್ರದ ನಿರ್ದೇಶಕ ಶ್ರೀ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ತೆಲುಗಿನಲ್ಲಿ ಡಾ.ರಾಜಶೇಖರ್ ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಖಾಕಿ ಹಿಂದಿ ರಿಮೇಕ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ ಎನ್ನುವ ಚೆಲುವೆ ಸಂಜನಾ, ಕೌಟುಂಬಿಕ ಕಥಾಹಂದರವುಳ್ಳ ಪಾತ್ರದಲ್ಲಿ ನಾನು ನಟಿಸುತ್ತಿರುವೆ. ಇದರಲ್ಲಿ ನನ್ನ ನಟನೆಯನ್ನು ನಿರೂಪಿಸುವೆ ಎಂದು ವಿಶ್ವಾಸದಿಂದ ಹೇಳಿದರು. ತೆಲುಗಿನ ಖಾಕಿಯಲ್ಲಿರುವ ಇವರ ಪಾತ್ರ, ಹಿಂದಿ ಖಾಕಿ ಚಿತ್ರದಲ್ಲಿ ಇಲ್ಲ ಎಂದು ಸಂಜನಾ ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಕನ್ನಡದ ನಟಿ ಸಂಜನಾಗೆ ಹೆಚ್ಚು ಅವಕಾಶಗಳು ಸಿಗಲಿ, ಹೆಚ್ಚು ಹೆಚ್ಚು ಬೆಳೆಯಲಿ. ಹಳೆಯ ತಪ್ಪು ಮರುಕಳಿಸದಿರಲಿ.

(ದಟ್ಸ್ ಕನ್ನಡ ಸಿನಿವಾರ್ತೆ)

ಸಂಜನಾ ನವನವೀನ ಚಿತ್ರಗಳ ಗ್ಯಾಲರಿ
ಸಂಜನಾಳ ಮೋಹಕ ವಾಲ್‌ಪೇಪರ್‌ಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada