»   » ಕನ್ನಡಾಭಿಮಾನ ಮೆರೆದ ಅರ್ಜುನ್ ಸರ್ಜಾ ಕುಟುಂಬ

ಕನ್ನಡಾಭಿಮಾನ ಮೆರೆದ ಅರ್ಜುನ್ ಸರ್ಜಾ ಕುಟುಂಬ

Posted By:
Subscribe to Filmibeat Kannada
Arjun Sarja
ಕನ್ನಡಿಗ, ತಮಿಳು ಸ್ಟಾರ್ ನಟ ಅರ್ಜುನ್ ಸರ್ಜಾ, ಕನ್ನಡನಾಡಿನ ತುಮಕೂರಿಗೆ ಬಂದು ಹೋಗಿದ್ದಾರೆ. ಅದು ಅವರು ನಟಿಸುತ್ತಿರುವ ಕನ್ನಡ ಚಿತ್ರ 'ಪ್ರಸಾದ್' ಪ್ರಚಾರಕ್ಕಿರಬೇಕೆಂದು ನೀವು ಅಂದುಕೊಂಡರೆ ಮಹಾತಪ್ಪು. ಅರ್ಜುನ್ ಸರ್ಜಾರ ತಾಯಿ ಲಕ್ಷ್ಮಿದೇವಿ ತುಮಕೂರಿನ ಮಧುಗಿರಿಯಲ್ಲಿ ದೇವಾಲಯ ನಿರ್ಮಿಸಿ ರಿಯಲ್ ಕನ್ನಡಾಭಿಮಾನ ಮೆರೆದಿದ್ದಾರೆ.

ತುಮಕೂರಿನ ಮಧುಗಿರಿಯಲ್ಲಿ ತಮ್ಮ ತಾಯಿ ನಿರ್ಮಿಸಿರುವ ದೇವಾಲಯದ ಪ್ರಾರಂಭೋತ್ಸವಕ್ಕೆ ಬಂದಿದ್ದರು ಅರ್ಜುನ್ ಸರ್ಜಾ. ಸದ್ದಿಲ್ಲದೇ ಕುಟುಂಬದೊಂದಿಗೆ ಬಂದು ಸುದ್ದಿಮಾಡದೇ ಹೊರಟುಹೋಗಿದ್ದಾರೆ ಈ ಕನ್ನಡದ ಕುಡಿ ತಮಿಳು ನಟ. ನೆರೆಭಾಷೆಯಲ್ಲಿ ಮಿಂಚುತ್ತಿದ್ದರೂ ಹುಟ್ಟಿದ ಕನ್ನಡನಾಡಿನಲ್ಲಿ ದೇವಾಲಯ ನಿರ್ಮಿಸಿ ಕನ್ನಡಾಭಿಮಾನ ಮೆರೆದ ಸರ್ಜಾರ ಅಭಿಮಾನಕ್ಕೆ ಕನ್ನಡಿಗರ ಹೃದಯ ತುಂಬಿಬಂದಿದೆ.

ಅಂದಹಾಗೆ ಅರ್ಜುನ್ ಸರ್ಜಾ ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಈಗಾಗಲೇ ಕನ್ನಡ ನಟ ಎನಿಸಿಕೊಂಡಿದ್ದಾರೆ. ಅವರ ಸಹೋದರ ಧ್ರುವ ಸರ್ಜಾ 'ಅದ್ದೂರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಕ್ಕೆ ದಿನಗಣನೆ ಪ್ರಾರಂಭಿಸಿದ್ದಾರೆ. ಸ್ಬತಃ ಅರ್ಜುನ್ ಸರ್ಜಾ, ಕನ್ನಡದಲ್ಲಿ ನಟಿಸಿರುವ 'ಪ್ರಸಾದ್' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚಿಗಷ್ಟೇ ನಡೆದಿದೆ. ಒಟ್ಟಿನಲ್ಲಿ ಅರ್ಜುನ್ ಸರ್ಜಾ ಕನ್ನಡಾಭಿಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. (ಒನ್ ಇಂಡಿಯಾ ಕನ್ನಡ)

English summary
Actor Arjun Sarja's mother Lakshmidevi constructed a Temple in Madhugiri, Tumkur District. Arjun Sarja came for Madhigiri for the temple Ingratiation recently. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X