ಖಿಲಾಡಿ ಅಕ್ಷಯ್, ಹಿಮೇಶ್ ಜೊತೆ ಇಲಿಯಾನ್ ರೇಸ್

ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಸೌತ್ ಇಂಡಿಯನ್ ಸೆನ್ಸೇಷನ್ ಇಲಿಯಾನಾಗೆ ಇನ್ನೊಂದು ಲಕ್ ಜೊತೆಯಾಗಿದೆ. ಅಕ್ಷಯ್ ಕುಮಾರ್ ನಾಯಕತ್ವದ 'ಖಿಲಾಡಿ 786' ಚಿತ್ರದಲ್ಲಿ ಇಲಿಯಾನಾ ನಾಯಕಿ. ಈಗಾಗಲೇ 'ಬರ್ಫಿ' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಬೇರುಬಿಟ್ಟಿರುವ ಇಲಿಯಾನಾ ಇನ್ನೊಂದು ಚಿತ್ರವನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಹಲವರ ಹುಬ್ಬೇರಿಸಿದ್ದಾರೆ.

ಅಕ್ಷಯ್ ಕುಮಾರ್ ಇದನ್ನು ನಿರ್ಮಿಸುತ್ತಿರುವುದು ಇನ್ನೊಂದು ವಿಶೇಷ. ಹಾಗೇ ಹಿಮೇಶ್ ರೇಶಿಮಿಯಾ ಕೂಡ ನಿರ್ಮಾಣದಲ್ಲಿ ಕೈಜೋಡಿಸಲಿದ್ದು ಜೊತೆಗೊಂದು ಪಾತ್ರವನ್ನೂ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಖುಷಿಯಲ್ಲಿದ್ದ ಇಲಿಯಾನಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೌತ್ ಇಂಡಿಯಾ ನಟಿಯರಿಗೆ 'ಶಾಕ್' ನೀಡಿದ್ದಾರೆ.

ಈಗಾಗಲೇ ಹಲವು ನಟಿಯರು ಬಾಲಿವುಡ್ ನಲ್ಲಿ ಛಾನ್ಸ್ ಗಿಟ್ಟಿಸಿಕೊಂಡಿದ್ದರೂ ಅದ್ಯಾವುದೂ ಸಕ್ಸಸ್ ಆಗದೇ ಹೋದ ದಾರಿಗೆ
ಬೇಸರಿಸಿಕೊಳ್ಳದೇ ವಾಪಸ್ ಗೂಡಿಗೆ ಬಂದಾಗಿದೆ. ತ್ರಿಶಾ ಕೂಡ ಬಾಲಿವುಡ್ ಬಿಸಿ ಮುಟ್ಟಿಸಿಕೊಂಡು ಬಂದವರೇ. ಈಗ ಇಲಿಯಾನಾ ಸರದಿ. ಏನಾಗುತ್ತೋ ಯಾರಿಗೆ ಗೊತ್ತು. ಎರಡೂ ಚಿತ್ರ ಕೈಕೊಡದಿದ್ದರೆ ಸಾಕು. (ಏಜೆನ್ಸೀಸ್)

More from Filmibeat

English summary
Actress Ileana acts in Bollywood movie Khiladi 786. Akshay Kumar and Himesh Reshammiya are the producers cum Actors.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X