twitter
    For Quick Alerts
    ALLOW NOTIFICATIONS  
    For Daily Alerts

    ದ್ವಾರಕೀಶ್ ಚಲನಚಿತ್ರ ಆಯ್ಕೆ ಸಲಹಾ ಸಮಿತಿ ಅಧ್ಯಕ್ಷ

    By Prasad
    |

    Dwarakish replaces Bharthi Vishnuvardhan
    2009-10ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಚಲನಚಿತ್ರಗಳನ್ನು ಆಯ್ಕೆ ಮಾಡುವ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಭಾರತಿ ವಿಷ್ಣುವರ್ಧನ್ ಅವರ ಬದಲಾಗಿ ಹಿರಿಯ ಚಿತ್ರ ನಟ, ನಿರ್ಮಾಪಕ ದ್ವಾರಕೀಶ್ ಅವರನ್ನು ಮತ್ತು ಸಮಿತಿಯ ಸದಸ್ಯರನ್ನಾಗಿ ಹಿರಿಯ ನಟ ಲೋಕನಾಥ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಈ ಹಿಂದೆ ದಿನಾಂಕ 6-4-2011ರ ಸರ್ಕಾರಿ ಆಜ್ಞೆಯನ್ವಯ ಭಾರತಿ ವಿಷ್ಣುವರ್ಧನ್ ಹಾಗೂ ಲೋಹಿತಾಶ್ವ ಅವರುಗಳನ್ನು ಕ್ರಮವಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ, ಅವರ ಅನುಮತಿಯಿಲ್ಲದೆ ನೇಮಿಸಲಾಗಿತ್ತು. ಪ್ರಶಸ್ತಿ ಪಟ್ಟಿಯಲ್ಲಿ ಆಪ್ತರಕ್ಷಕ ಚಿತ್ರವಿದ್ದರಿಂದ ಭಾರತಿ ಅದನ್ನು ನಿರಾಕರಿಸಿದ್ದರು.

    ಶಿವರಾಂ ಸಹಾಯಧನ ಆಯ್ಕೆ ಸಮಿತಿ ಅಧ್ಯಕ್ಷ : 2009-10ನೇ ಸಾಲಿನ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನಕ್ಕಾಗಿ ಆಯ್ಕೆ ಮಾಡಲು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಕೆ.ಸಿ.ಎನ್. ಗೌಡ ಅವರ ಬದಲಾಗಿ ಹಿರಿಯ ಕಲಾವಿದರಾದ ಎಸ್. ಶಿವರಾಂ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಈ ಮೊದಲು ನಿರ್ಮಾಪಕ ಕೆ.ಸಿ.ಎನ್. ಗೌಡ ಅವರನ್ನು ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಸಹಾಯಧನಕ್ಕಾಗಿ ಆಯ್ಕೆ ಮಾಡುವ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಆ ಆದೇಶವೂ ರದ್ದಾಗಿದೆ.

    English summary
    Actor Dwarakish has replaced Bharathi Vishnuvardhan as chairman of Kannada film award committee. Bharathi Vishnuvardhan was appointed earlier to the committee without her permission, which she declined as Vishnuvardhan's Aptha Rakshaka was in the race for award.
    Thursday, July 14, 2011, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X