ಅತ್ಯುತ್ತಮ ಚಿತ್ರಗಳ ವೀಕ್ಷಣೆಗೆ ಬೆಂಗಳೂರು ಥಿಯೇಟರ್

ದಕ್ಷಿಣ ಆಫ್ರಿಕಾದ ಜುಲು ಭಾಷೆಯ 'ಲಕಿ' ಚಿತ್ರ ಉದ್ಘಾಟನಾ ಚಿತ್ರ ಪ್ರದರ್ಶಿತವಾಗಲಿದೆ. ನಿಮ್ಮ ಮನದಾಸೆಯ ಅತ್ಯುತ್ತಮ ಚಿತ್ರಗಳ ವೀಕ್ಷಣೆಗೆ ಅಪೂರ್ವ ಅವಕಾಶ. ಸಿನಿಮೋತ್ಸವದಲ್ಲಿ 175 ಅತ್ಯುತ್ತಮ ಚಲನಚಿತ್ರಗಳು, 130 ವಿದೇಶಿ ಚಿತ್ರಗಳು, ಭಾರತದ 45 ಚಲನಚಿತ್ರಗಳು ಪ್ರದರ್ಶನ ಕಾಣಲಿವೆ.
ಕನ್ನಡದ ನನ್ನ ಗೋಪಾಲ, ಗಾಂಧಿ ಸ್ಮೈಲ್, ಪುಟ್ಟಕ್ಕನ ಹೈವೆ, ಹೆಜ್ಜೆಗಳು, ಪ್ರಾರ್ಥನೆ, ಶಬ್ದಮಣಿ, ಒಲವೇ ಮಂದಾರ, ಚಿಂಟು ಸ್ಕೂಲ್, ಸೂಪರ್ ಸೇರಿದಂತೆ ಒಟ್ಟು 15 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಿಷ್ಟೇ ಅಲ್ಲದೆ ಫ್ರಾನ್ಸ್, ಅಲ್ಜೀರಿಯಾ, ಜರ್ಮನಿ, ಪೋಲೆಂಡ್, ಇರಾನ್, ಇಸ್ರೇಲ್, ಕೆನಡಾ, ಆಸ್ಟ್ರೇಲಿಯಾ, ಈಜಿಪ್ಟ್ ಸೇರಿದಂತೆ 40 ದೇಶಗಳ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.
ಥಿಯೋಆಂಜೆಲೊಪೌಲೋಸ್, ಮೈಕೆಲ್ ಕ್ಯಾಕೊಯನ್ನಿಸ್, ಧರುಷಿ ಮೆಹರ್ಜುಯಿ, ಜಿ ಅರವಿಂದ್, ಪುಟ್ಟಣ್ಣ ಕಣಗಾಲ್ ಮತ್ತಿತರ ವಿಶ್ವದ ಹೆಸರಾಂತ ಚನನಚಿತ್ರ ನಿರ್ದೇಶಕರ ಅತ್ಯುತ್ತಾಮ ಸಿನಿಮಾಗಳ ರಸಗವಳ ಸವಿಯಬಹುದು. ಈ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗಳಲ್ಲದೇ, ವಿಚಾರ ಸಂಕಿರಣ, ಚಿತ್ರರಂಗದ ದಿಗ್ಗಜರಿಂದ ಪ್ರಬಂಧ ಮಂಡನೆ, ಕಾರ್ಯಾಗಾರಗಳು ನದೆಯಲಿವೆ.
ಚಲನಚಿತ್ರ ಪ್ರದರ್ಶನ ಮಂದಿರಗಳು: ವಾರ್ತಾ ಇಲಾಖೆ (ಇನ್‌ಫೆಂಟ್ರಿ ರಸ್ತೆ), ಸುಚಿತ್ರ (ಬನಶಂಕರಿ 2ನೇ ಹಂತ), ಪ್ರಿಯದರ್ಶಿನಿ (ಬಾದಾಮಿ ಹೌಸ್, ಎನ್ ಆರ್ ಚೌಕ), ಫೇಮ್ ಲಿಡೋ (ಎಂ ಜಿ ರಸ್ತೆ), ಸೆಂಟ್ರಲ್ ಐನಾಕ್ಸ್ (ಮಂತ್ರಿ ಜಂಕ್ಷನ್, ಜೆಪಿ ನಗರ), ರಿಜಾಯಿಸ್ (ಮಲ್ಲೇಶ್ವರಂ). (ಒನ್‌ಇಂಡಿಯಾ ಕನ್ನಡ)


Click it and Unblock the Notifications











