»   » ಬಿಎಂಟಿಸಿ ಬಸ್ ಗಳಿಗೆ ಮಸ್ತ್ ಅಲಂಕಾರ

ಬಿಎಂಟಿಸಿ ಬಸ್ ಗಳಿಗೆ ಮಸ್ತ್ ಅಲಂಕಾರ

Subscribe to Filmibeat Kannada
BMTC buses with Mast Maja Madi posters
ಪ್ರೇಕ್ಷಕ ಪ್ರಭುವನ್ನು ಚಿತ್ರಮಂದಿರಗಳತ್ತ ಸೆಳೆಯಲು ನಿರ್ಮಾಪಕ ಮಹಾಶಯರು ನಾನಾ ಪ್ರಚಾರ ತಂತ್ರಗಳನ್ನು ಹುಡುಕುತ್ತಿದ್ದಾರೆ. ಹಾಗೆ ಕಂಡುಕೊಂಡ ಹೊಸ ಪ್ರಚಾರ ತಂತ್ರವೇ ಸಂಚಾರಿ ಜಾಹೀರಾತು. ಬಿಎಂಟಿಸಿ ಬಸ್ಸುಗಳ ಮೂಲಕ ನಾನಾ ವರ್ಗದ ಪ್ರೇಕ್ಷಕರನ್ನು ಸೆಳೆಯುವ ತಂತ್ರ.

ಪುನೀತ್ ರಾಜ್ ಕುಮಾರ್ ನಟನೆಯ 'ವಂಶಿ'ಚಿತ್ರ ಮೊದಲ ಬಾರಿಗೆ ಬಿಎಂಟಿಸಿ ಬಸ್ಸೇರಿತು. ಇದೀಗ 'ಮಸ್ತ್ ಮಜಾ ಮಾಡಿ' ಚಿತ್ರ ಬಿಎಂಟಿಸಿಯ ಐದು ಬಸ್ಸುಗಳನ್ನು ಅಲಂಕರಿಸಿದೆ.ಈ ಬಸ್ಸುಗಳು ಬೆಂಗಳೂರಿನ ಪೀಣ್ಯ, ರಾಜಾಜಿನಗರ,ಚಂದ್ರಲೇಔಟ್,ಜಯನಗರ, ಮೈಸೂರು ರಸ್ತೆ, ಬನಶಂಕರಿ, ಕೆ.ಆರ್.ಪುರಂ, ಐಟಿಪಿಎಲ್, ಯಲಹಂಕ,ಮಹಾಲಕ್ಷ್ಮಿ ಬಡಾವಣೆ, ಏರ್ ಫೋರ್ಟ್ ರಸ್ತೆ, ವಿಜಯನಗರ ಮೊದಲಾದ ಕಡೆ ಸಂಚರಿಸಲಿವೆ. ಒಂದು ತಿಂಗಳ ಕಾಲ ಬಸ್ಸುಗಳು ಸಂಚರಿಸಿ 'ಮಸ್ತ್ ಮಜಾ ಮಾಡಿ' ಚಿತ್ರಕ್ಕೆ ಮಸ್ತ್ ಪ್ರಚಾರ ನೀಡಲಿವೆ.

ಅಂದಹಾಗೆ,ಪ್ರತಿ ಬಸ್ ಗೆ ತಿಂಗಳಿಗೆ ರು.2 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಹಾಗೆಯೇ ಪ್ರತಿ ಬಸ್ ಗೆ ಚಿತ್ರದ ಪೋಸ್ಟರ್ ಗಳನ್ನು ಅಳವಡಿಸಲು ಬರೋಬ್ಬರಿ ರು.50,000 ಖರ್ಚು ಮಾಡಿದ್ದಾರೆ ನಿರ್ಮಾಪಕಿ ಸೌಂದರ್ಯ ಜಗದೀಶ್. ಈ ಐದು ಬಸ್ಸುಗಳಲ್ಲಿ ಮಸ್ತ್ ಮಜಾ ಮಾಡಿ ಚಿತ್ರದ ಹಾಡುಗಳನ್ನು ಪ್ರಸಾರ ಮಾಡುವ ಯೋಜನೆಯೂ ಅವರಿಗಿದೆ. ಸೌಂದರ್ಯ ನಮನ ಕ್ರಿಯೇಷನ್ಸ್ ನಡಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ಚಿತ್ರದಲ್ಲಿ ವಿಜಯ ರಾಘವೇಂದ್ರ, ಕೋಮಲ್,ದಿಗಂತ್, ನಾಗಕಿರಣ್, ಸುದೀಪ್, ಜೆನ್ನಿಫರ್ ಕೊತ್ವಾಲ್ ನಟಿಸಿರುವುದು ಗೊತ್ತಿರುವ ವಿಚಾರವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada