ಮರೆಯಲಾರೆ ಚಿತ್ರದಿಂದ ಚೇತನ್‌ಗೆ ಗೇಟ್ ಪಾಸ್
'ಆ ದಿನಗಳು' ಖ್ಯಾತಿಯ ಚೇತನ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಕಾರಣ ಕೊಂಚ ಬ್ರೇಕ್‌ನ ಬಳಿಕ ಅವರು ಒಪ್ಪಿಕೊಂಡಿದ್ದ 'ಮರೆಯಲಾರೆ' ಚಿತ್ರದಿಂದ ಗೇಟ್ ಪಾಸ್ ಸಿಕ್ಕಿದೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನವೇ ಚಿತ್ರದ ನಾಯಕ ನಟ ಚೇತನ್ ಹೊರಬಿದ್ದಿದ್ದಾರೆ.
ಈ ಚಿತ್ರದಿಂದ ಚೇತನ್ ಯಾಕೆ ಹೊರಬಂದರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.ದಿವಂಗತ ಖಾದ್ರಿ ಶಾಮಣ್ಣನವರ ಸಹೋದರ ಖಾದ್ರಿ ಅಚ್ಯುತನ್ ರವರ ಪುತ್ರ ಶರತ್ ಖಾದ್ರಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈಗ ಏಕಾಏಕಿ ಚೇತನ್ ಚಿತ್ರದಿಂದ ಹೊರಬಿದ್ದ ಬಳಿಕ ಶರತ್ ಕದ್ರಿ ಅವರಿಗೆ ಚೊಚ್ಚಲನ ನಿರ್ದೇಶನದಲ್ಲೆ ಸಂಕಷ್ಟ ಎದುರಾಗಿದೆ.
ಜುಲೈ ತಿಂಗಳಲ್ಲಿ ಈ ಚಿತ್ರವನ್ನು ವಿಭಿನ್ನವಾಗಿ ಆರಂಭಿಸಲಾಗಿತ್ತು. ಕೆಲವೆ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು , ಚಿಕ್ಕಮಗಳೂರು, ಮೇಲುಕೋಟೆ, ಉತ್ತರ ಕರ್ನಾಟಕ , ಅಂಡಮಾನ್, ಹಾಕಾಂಗ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ರವರ ಸಂಗೀತ ಹಾಗೂ ನಾರಾಯಣರ ಛಾಯಾಗ್ರಹಣವಿದೆ.
ಸುರಭಿ ಟಾಕೀಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರದ ನಾಯಕಿ ಸಿಂಧೂ ಲೋಕನಾಥ್. ಒಟ್ಟಿನಲ್ಲಿ ಈಗ ತೆರವಾಗಿರುವ ಚೇತನ್ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ನಿರ್ದೇಶಕರಿಗೆ ಬೃಹತ್ ಪ್ರಶ್ನೆಯಾಗಿ ಕಾಡುತ್ತಿದೆ. ಚಿತ್ರದಿಂದ ಗೇಟ್ ಪಾಸ್ ಚೇತನ್ ಅವರೆ ತೆಗೆದುಕೊಂಡರೆ ಅಥವಾ ಇನ್ಯಾರಾದರೂ ಗೇಟ್ ಪಾಸ್ ಕೊಟ್ಟರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.


Click it and Unblock the Notifications











