»   » ದರ್ಶನ್‍‌ರನ್ನು ನಂಬರ್ 2 ಪಟ್ಟಕ್ಕೇರಿಸಿದ ಚಿಂಗಾರಿ

ದರ್ಶನ್‍‌ರನ್ನು ನಂಬರ್ 2 ಪಟ್ಟಕ್ಕೇರಿಸಿದ ಚಿಂಗಾರಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸಾಫೀಸ್ ಬಾದ್ ಶಾ ಅನ್ನಿಸಿಕೊಂಡಿದ್ದಾರೆ. ಫೆಬ್ರವರಿ 16ರಂದು ದರ್ಶನ್ ಬರ್ತ್ ಡೇ. ಇದಕ್ಕೂ ಮುನ್ನವೇ 'ಚಿಂಗಾರಿ' ಚಿತ್ರ ಬಾಕ್ಸಾಫೀಸ್‌ನಲ್ಲಿ ಬಂಗಾರದ ಕಲೆಕ್ಷನ್ ಮಾಡಿದೆ. ಚಿತ್ರದ ನಿರ್ಮಾಪಕರು ಅಧಿಕೃತವಾಗಿ 'ಚಿಂಗಾರಿ' ಗಳಿಕೆಯನ್ನು ಘೋಷಿಸಿದ್ದಾರೆ.

'ಚಿಂಗಾರಿ' ನಿರ್ಮಾಪಕ ಮಹದೇವ್ ಅವರ ಪ್ರಕಾರ ಚಿತ್ರದ ಮೊದಲ ವಾರದ ಗಳಿಕೆ ರು.6,07,60,000 (ಆರು ಕೋಟಿ ಏಳು ಲಕ್ಷ ಅರುವತ್ತು ಸಾವಿರ ರುಪಾಯಿಗಳು!). ಎರಡು ವಾರ ಪೂರೈಸಿರುವ ಚಿತ್ರ 140 ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ಕಚ್ಚಿಕೊಂಡು ಮುನ್ನುಗ್ಗುತ್ತಿದೆ.

ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರದೋದ್ಯಮದಲ್ಲಿ ನಂಬರ್ 2 ಪಟ್ಟಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದಾರೆ. 'ಸಾರಥಿ' ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಹಿಟ್ ದಾಖಲಿಸಿದ ಬಳಿಕ 'ಚಿಂಗಾರಿ' ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಬೆಲೆಗೆ ಮಾರಾಟವಾಗಿತ್ತು. (ಏಜೆನ್ಸೀಸ್)

English summary
The first week collection of Kannada movie Chingari is Rs.6 crores, 7 lakhs and 60000 rupees says the proud producer Mahadevu. The film 'Chingari' by Harsha is going strong in the second week in nearly 140 theatres.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X