ದುನಿಯಾ ವಿಜಯ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಗೌರವ

By Staff

ಚೆನ್ನೈ, ಜುಲೈ13:ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ 55 ನೇ ಫಿಲ್ಮ್ ಫೇರ್ ಪ್ರಶಸ್ತಿ(ದಕ್ಷಿಣ)ಗಳನ್ನು ಪ್ರದಾನ ಮಾಡಲಾಯಿತು. ದಕ್ಷಿಣ ವಿಭಾಗ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಕನ್ನಡ,ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಿಗೆ ನೀಡಲಾಯಿತು. ಕಾರ್ಯಕ್ರಮವನ್ನು ನಟ ಮಾಧವನ್ ಹಾಗೂ ಸಿಂಧೂರ ಪ್ರಸ್ತುತಪಡಿಸಿದರು. ಕನ್ನಡ ವಿಭಾಗದಲ್ಲಿ ಪ್ರಶಸ್ತಿಗಳಿಸಿದ ಚಿತ್ರಗಳು ಹೀಗಿದೆ:

ಶ್ರೇಷ್ಠ ಚಿತ್ರ: ಆ ದಿನಗಳು
ಶ್ರೇಷ್ಠ ನಿರ್ದೇಶಕ: ಚೈತನ್ಯ (ಆ ದಿನಗಳು)
ಶ್ರೇಷ್ಠ ನಟ: ವಿಜಯ್ (ದುನಿಯಾ)
ಶ್ರೇಷ್ಠ ನಟಿ: ರಶ್ಮಿ(ದುನಿಯಾ)
ಶ್ರೇಷ್ಠ ಪೋಷಕ ನಟ: ಶರತ್ ಲೋಹಿತಾಶ್ವ (ಆ ದಿನಗಳು)
ಶ್ರೇಷ್ಠ ಪೋಷಕ ನಟಿ: ತಾರಾ ( ಈ ಬಂಧನ)
ಶ್ರೇಷ್ಠ ಸಂಗೀತ ನಿರ್ದೇಶಕ :ಮನೋಮೂರ್ತಿ
ಶ್ರೇಷ್ಠ ಗಾಯಕ: ಸೋನು ನಿಗಮ್ (ನಿನ್ನಿಂದಲೇ..ಮಿಲನ)
ಶ್ರೇಷ್ಠ ಗಾಯಕಿ: ನಂದಿತಾ(ಕರಿಯ ಐ ಲವ್ ಯೂ.....ದುನಿಯಾ)
ಶ್ರೇಷ್ಠ ಸಾಹಿತಿ: ವಿ ಮನೋಹರ್(ಕಣ್ಣಲ್ಲೂ ನೀನೇನೆ..ಪಲ್ಲಕ್ಕಿ)

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X