For Quick Alerts
  ALLOW NOTIFICATIONS  
  For Daily Alerts

  'ಪ್ಯಾರ್' ಹಾಡಿನ ಪವಾಡ; ಕೋಮಲ್‌ಗೆ ಭರ್ಜರಿ ರೇಟು

  By Rajendra
  |

  ಒಂದೇ ಒಂದು ಹಾಡು ಏನೆಲ್ಲಾ ಪವಾಡ ಮಾಡಿಬಿಡುತ್ತದೆ ಎಂಬುದಕ್ಕೆ ನಿದರ್ಶನ "ಪ್ಯಾರ್‌ಗೆ ಆಗ್ಬಿಟ್ಟೈತೆ..." ಹಾಡು. ಹಾಸ್ಯ ನಟ ಕೋಮಲ್ ಕುಮಾರ್ ನಂಬಲಿಕ್ಕೂ ಆಗದಷ್ಟು ಪಾಪ್ಯುಲರ್ ಆಗಿಬಿಟ್ಟಿದ್ದಾರೆ. 'ಗೋವಿಂದಾಯ ನಮಃ' ಚಿತ್ರದಲ್ಲಿನ ಈ ಒಂದೇ ಒಂದು ಹಾಡಿನಿಂದ ಕೋಮಲ್ ಸಂಭಾವನೆಯೂ ಸಿಕ್ಕಾಪಟ್ಟೆ ಏರಿಕೆಯಾಗಿದೆ.

  ಸಾಮಾನ್ಯವಾಗಿ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ಸಂಭಾವನೆ ಪಡೆಯುತ್ತಿದ್ದ ಕೋಮಲ್ ರೇಟು ಈಗ ದಿಢೀರ್ ಎಂದು ಬದಲಾಗಿದೆ. ಈಗವರ ಸಂಭಾವನೆ ಮೂವತ್ತೈದರಿಂದ ನಲವತ್ತು ಲಕ್ಷ ಎನ್ನುತ್ತವೆ ಮೂಲಗಳು. ಈ ಹಾಡು 'ಯೂಟ್ಯೂಬ್‌'ಗೆ ಲಗ್ಗೆ ಹಾಕಿದ ಮೇಲಂತೂ ಪಡ್ಡೆಗಳು ಮುಗಿಬಿದ್ದು ನೋಡಿ ಆನಂದಿಸಿದ್ದಾರೆ.

  ಇನ್ನು ಈ ಹಾಡನ್ನು ಬರೆದಿರುವ ಪವನ್ ಒಡೆಯರ್ ಅವರಿಗೂ ಅದೃಷ್ಟ ಖಲಾಯಿಸಿದೆ. ನಮಗೊಂದು ಹಾಡು ಬರೆದುಕೊಡಿ ಎಂದು ನಿರ್ಮಾಪಕರು ಹುಡುಕಿಕೊಂಡು ಬರುತ್ತಿದ್ದಾರಂತೆ. ಒಟ್ಟಾರೆಯಾಗಿ ಈ ಒಂದೇ ಒಂದು ಹಾಡಿನಿಂದ ಇಡೀ ಚಿತ್ರರಂಗದ ನಸೀಬು ಬದಲಾಗಿದೆ. (ಏಜೆನ್ಸೀಸ್)

  English summary
  After 'Pyar Ge Aagbittaithe' song from Govindaya Namaha, have become a huge hit Komal Kumar salary also hiked. Sources says that he is demanding Rs.35 to 40 lakhs. Brimming with confidence about the success of his maiden film, director Pavan Wadiyar, a software engineer, has said that 'Govindaaya Namaha' has all the ingredients that are necessary to entertain the audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X