ಸೆನ್ಸಾರ್ ಮೆಚ್ಚಿದ ‘ಇನಿಯ’
ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಇನಿಯ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ ಎಂದು ನಿರ್ಮಾಪಕ ಶೈಲೇಂದ್ರ ಬಾಬು ತಿಳಿಸಿದ್ದಾರೆ.
ಖ್ಯಾತ ನಟ ರವಿಚಂದ್ರನ್ ಅವರ ಸಹೋದರ ಬಾಲಜಿ 'ಇನಿಯ'ನಾಗಿ ಅಭಿನಯಿಸಿದ್ದು, 'ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ 'ಇನಿಯ'ನ ನಾಯಕಿಯಾಗಿದ್ದಾರೆ. ಈ ಜೋಡಿಯೊಂದಿಗೆ ಅನುಭವಿ ಕಲಾವಿದರ ಅಭಿನಯದಲ್ಲಿ ಮೂಡಿ ಬಂದಿರುವ ಈ ಚಿತ್ರ ಪರಿಶುದ್ಧ ಮನೋರಂಜನೆಯೊಂದಿಗೆ ಕೂಡಿರುವ ವಿಭಿನ್ನ ಕಥಾವಸ್ತು ಎಂದು ನಿರ್ದೇಶಕ ಮುಸ್ಸಂಜೆ ಮಹೇಶ್ ತಿಳಿಸಿದ್ದಾರೆ.
ಅತೀ ಶೀಘದಲ್ಲೇ 'ಇನಿಯ' ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದ್ದಾನೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಧುಸೂಧನ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿ.ಶ್ರೀಧರ್ ಸಂಗೀತ, ಕವಿರಾಜ್, ಶ್ರೀಧರ್ ಗೀತರಚನೆ, ಮೋಹನ್ ಸಂಕಲನ, ರವಿವರ್ಮರ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ಜೈಜಗದೀಶ್, ಊರ್ವಶಿ, ರೇಖಾ, ಜ್ಯೋತಿ, ನೀನಾಸಂ ಅಶ್ವತ್, ಹರೀಶ್ ರಾಯ್, ಲೋಕನಾಥ್, ಬಿ.ವಿ.ರಾಧಾ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











