»   » ಹಾಗೆ ಸುಮ್ಮನೆ ಚಿತ್ರಕ್ಕೆ ಕಾಯ್ಕಿಣಿ ಸಾಹಿತ್ಯ ಸ್ಪರ್ಶ

ಹಾಗೆ ಸುಮ್ಮನೆ ಚಿತ್ರಕ್ಕೆ ಕಾಯ್ಕಿಣಿ ಸಾಹಿತ್ಯ ಸ್ಪರ್ಶ

Posted By:
Subscribe to Filmibeat Kannada

ಹಿಂದಿನಿಂದಲೂ ಕನ್ನಡ ಚಿತ್ರಗೀತೆಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಹುಣಸೂರು ಕೃಷ್ಣಮೂರ್ತಿ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಅವರಂಥ ದಿಗ್ಗಜರು ಕನ್ನಡ ಚಿತ್ರಗಳಿಗೆ ಉತ್ತಮ ಗೀತೆಗಳನ್ನು ನೀಡಿ ಚಿರಸ್ಥಾಯಿಯಾದವರು. ಕನ್ನಡ ಚಿತ್ರದಲ್ಲಿ ಉತ್ತಮ ಗೀತೆಗಳು ಮರೆಯಾಗುತ್ತಿದ್ದ ಸಮಯದಲ್ಲಿ ಚಿತ್ರರಂಗಕ್ಕೆ ವರವಾಗಿ ಬಂದವರು ಜಯಂತ ಕಾಯ್ಕಿಣಿ. ಮುಂಗಾರು ಮಳೆಯ ಮೂಲಕ ಉತ್ತಮ ಸಾಹಿತ್ಯದ ಹೊಳೆಯನ್ನು ಹರಿಸಿದ ಕಾಯ್ಕಿಣಿ ಅವರು ಧರ್ಮ ಪಿಕ್ಚರ್ಸ್ ಅವರ ಹಾಗೆ ಸುಮ್ಮನೆ ಚಿತ್ರಕ್ಕೂ ಉತ್ತಮ ಪ್ರೇಮ ಗೀತೆಗಳನ್ನು ರಚಿಸಿದ್ದಾರೆ.

'ಮಾಯಾವಾಗಿದೆ ಮನಸು ಹಾಗೆ ಸುಮ್ಮನೆ....ಗಾಯವ ಮಾಡಿದೆ ಮನಸು ಹಾಗೆ ಸುಮ್ಮನೆ..' ಶೀರ್ಷಿಕೆಗೀತೆ ಹಾಗೂ 'ನಾನೇನು ನಂಬೋದಿಲ್ಲ ಪ್ರೀತಿ ಗೀತಿಯೂ - ಸರಿ ಇನ್ನೊಮ್ಮೆ ಕೇಳು ನನ್ನ ಪ್ರೀತಿ ಗೀತೆಯ..' ಎಂಬ ಎರಡು ಗೀತೆಗಳನ್ನು ಮೈಸೂರಿನ ಸುತ್ತಮುತ್ತ ಕಿರಣ್ ಹಾಗೂ ಸುಹಾಸಿ ಅವರ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಚಿನ್ನಿಪ್ರಕಾಶ್ ಈ ಮೇಲಿನ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

ಮುಂಗಾರು ಮಳೆಯಂತ ಯಶಸ್ವಿ ಚಿತ್ರದ ಕಥೆಗಾರರಾದ ಪ್ರೀತಂಗುಬ್ಬಿ ಹಾಗೆ ಸುಮ್ಮನೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವುದಲ್ಲದೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಪ್ರಸ್ತುತ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದ್ದು ಎರಡು ಹಾಡಿನ ಚಿತ್ರೀಕರಣ ಬಾಕಿ ಇದೆ. ಬೆಂಗಳೂರು ಹಾಗೂ ಕುಮಟಾದಲ್ಲಿ ಈ ಗೀತೆಗಳು ಚಿತ್ರೀಕೃತವಾಗಲಿದೆ. ಮನೋಮೂರ್ತಿ ಸಂಗೀತವಿರುವ ಈ ಚಿತ್ರಕ್ಕೆ ಕೃಷ್ಣ ಅವರ ಛಾಯಾಗ್ರಹಣವಿದೆ. ಅಶೋಕ್ ಸಂಭಾಷಣೆ, ಮೋಹನ್ ಕಲೆ, ದೀಪು ಎಸ್ ಕುಮಾರ್ ಸಂಕಲನ, ಯೋಗಿ ಅವರ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಿರಣ್, ಸುಹಾಸಿ, ಚಂದ್ರಶೇಖರ್, ಶರತ್‌ಬಾಬು, ಯಮುನಾ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮುಂಗಾರುಮಳೆ ಪ್ರೀತಂ ಗುಬ್ಬಿ ಜತೆ ಹಾಗೇ ಸುಮ್ಮನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada