ಜೋಗಯ್ಯ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಅರ್ಪಣೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ಚಿತ್ರ ಜೋಗಯ್ಯ. ಪ್ರೇಮ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಆಗಸ್ಟ್ 12ರ ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಅರ್ಪಿಸುತ್ತಿದ್ದಾರೆ ಚಿತ್ರದ ನಿರ್ಮಾಪಕಿ ರಕ್ಷಿತಾ.
ಈಗಾಗಲೆ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ.ಈ ಬಾರಿ ಪ್ರೇಮ್ ಚಿತ್ರದಲ್ಲಿ ಏನೆಲ್ಲಾ ಆಕರ್ಷಣೆಗಳನ್ನಿಟ್ಟಿದ್ದಾರೆ ಎಂದು ಪ್ರೇಕ್ಷಕರು ಕುತೂಹಲದಿಂದ ಎದುರುನೋಡುವಂತಾಗಿದೆ. ಅಷ್ಟರ ಮಟ್ಟಿಗೆ ಪ್ರೇಮ್ ಕುತೂಹಲವನ್ನೂ ಕಾಯ್ದಿಟ್ಟಿದ್ದಾರೆ.
ಹತ್ತು ದಿನಗಳ ಮುಂಚಿತವಾಗಿಯೇ 'ಜೋಗಯ್ಯ' ಚಿತ್ರದ ಟಿಕೆಟ್‌ಗಳನ್ನು ವಿತರಿಸುವಂತೆ ಚಿತ್ರಮಂದಿರಗಳಿಗೆ ಸೂಚಿಸಿರುವುದಾಗಿ ಪ್ರೇಮ್ ಹೇಳಿದ್ದಾರೆ. ಇನ್ನು ಮಲ್ಟಿಫ್ಲೆಕ್ಸ್‌ಗಳಲ್ಲೂ ಒಂದು ವಾರದ ಮುಂಜೆ ಟಿಕೆಟ್ ನೀಡಲು ಮನವಿ ಮಾಡಲಾಗಿದೆ. ಜೋಗಯ್ಯ ಟಿ ಶರ್ಟ್‌ಗಳು ಕ್ಯಾಪ್‌ಗಳನ್ನು ಅಭಿಮಾನಿಗಳಿಗೆ ವಿತರಿಸಲಾಗಿದೆ.
ಜೋಗಯ್ಯ ಚಿತ್ರದ ಪ್ರಮುಖ ಆಕರ್ಷಣೆ ಹಾಡುಗಳು. ಕನ್ನಡ ಚಿತ್ರೋದ್ಯಮದಲ್ಲಿ ಜೋಗಯ್ಯ ಹಾಡುಗಳು ಹೊಸ ಮೈಲಿಗಲ್ಲಾಗಿ ನಿಲ್ಲಲಿವೆ ಎಂದಿದ್ದಾರೆ ಸೆಂಚುರಿ ಹೀರೋ ಶಿವರಾಜ್‌ಕುಮಾರ್. ಜೋಗಯ್ಯ ನೀ ಬಾರಯ್ಯ ಬೇಗ ಎಂಬ ಅದಮ್ಯ ಉತ್ಸಾಹದಲ್ಲಿದ್ದಾರೆ ಶಿವಣ್ಣ ಅಭಿಮಾನಿಗಳು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











