ಬಾಲಿವುಡ್ ತಾರೆ ಕಾಜೋಲ್‌ಗೆ ಗಂಡು ಮಗು
ಬಾಲಿವುಡ್ ತಾರೆ ಕಾಜೋಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈ ಬಾಂದ್ರಾ ಪ್ರದೇಶದ ಲೀಲಾವತಿ ಆಸ್ಪತ್ರೆಯಲ್ಲಿ ಕಾಜೋಲ್ ಸೋಮವಾರ ಬೆಳಗ್ಗೆ ಗಂಡು ಮಗುವನ್ನು ಪ್ರಸವಿಸಿದ್ದಾರೆ. ಆಕೆಯ ಪತಿ ಅಜಯ್ ದೇವಗನ್ ತಂದೆಯಾದ ಸಂತಸದಲ್ಲಿ ಮೈಮರೆತಿದ್ದಾರೆ.
ಭಾನುವಾರ ಸಂಜೆಯೇ ಆಸ್ಪತ್ರೆಗೆ ಕಾಜೋಲ್ ದಾಖಲಾಗಿದ್ದರು. ಜೊತೆಯಲ್ಲಿ ಆಕೆಯ ತಂಗಿ ತನಿಷಾ ಸಹ ಇದ್ದರು. ಪ್ರಮುಖ ವ್ಯಕ್ತಿಗಳಿಗೆಂದೇ ಮೀಸಲಾದ ಆಸ್ಪತ್ರೆಯ ಹನ್ನೊಂದನೆ ಮಹಡಿಯಲ್ಲಿ ಕಾಜೋಲ್ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು ಎನ್ನುತ್ತವೆ ಮೂಲಗಳು.
ಸರಿಸುಮಾರು ಬೆಳಗ್ಗೆ 9.20ರ ಸಮಯದಲ್ಲಿ ಕಾಜೋಲ್ ಗಂಡು ಮಗುವನ್ನು ಪ್ರಸವಿಸಿದರು ಎಂದು ಪ್ರಸೂತಿ ತಜ್ಞರಾದ ಡಾ.ನಂದಿತಾ ಪಾಲ್‌ಶೆಟ್ಕರ್ ಮತ್ತು ಡಾ.ರಿಷ್ಮಾ ಡಿಲ್ಲಾನ್ ಪೈ ತಿಳಿಸಿದ್ದಾರೆ. "ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ನಮ್ಮ ಕುಟುಂಬ ಅತೀವ ಸಂತಸದಲ್ಲಿದೆ" ಎಂದು ಕಾಜೋಲ್ ಪತಿ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ. ಈ ತಾರಾ ದಂಪತಿಗಳ ಮೊದಲ ಮಗು ಏಳು ವರ್ಷದ ನ್ಯಾಸಾ.


Click it and Unblock the Notifications











