ವಿಷ್ಣುವರ್ಧನ ಚಿತ್ರದಿಂದ 'ಆಟ'ವಾಡಿಸಿಕೊಂಡ ಆಟ
ಶ್ರೀಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ನಿರ್ಮಿಸುತ್ತಿರುವ 'ಆಟ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶೈಲೇಂದ್ರ ಮಗ ಸುಮಂತ್ ಶೈಲೇಂದ್ರ ಚಿತ್ರದ ಹೀರೋ. ವಿಭಾ ನಟರಾಜನ್ ಹೀರೋಯಿನ್. ವಿಜಯಕುಮಾರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರ ಈಗಾಗಲೇ ಕಳೆದ 11 ರಂದು ತೆರೆಗೆ ಅಪ್ಪಳಿಸಿರಬೇಕಿತ್ತು. ಆದರೆ ದ್ವಾರಕೀಶ್ ನಿರ್ಮಾಣದ ಸುದೀಪ್ ನಾಯಕತ್ವದ 'ವಿಷ್ಣವರ್ಧನ' ತೆರೆಕಾಣುತ್ತಿದೆ ಎಂದಿದ್ದ ಹಿನ್ನೆಲೆಯಲ್ಲಿ ಈ ಚಿತ್ರ ಮುಂದಕ್ಕೆ ಹೋಯ್ತ. ಆದರೆ ಆ ಚಿತ್ರ ತೆರೆಕಾಣಲೇ ಇಲ್ಲ. ಈ 'ಆಟ' ವನ್ನು ಆ ಚಿತ್ರ ಬಿಡುಗಡೆಗೆ ಮೊದಲೇ ಆಟವಾಡಿಸಿತು.
ಇದೀಗ ಆಟ ತೆರೆಗೆ ಬರಲಿರುವುದು ಪಕ್ಕಾ ಆಗಿದೆ. ಸುಮಂತ್ ಹಾಗೂ ಶೈಲೇಂದ್ರ, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಚೆಂದದ ಲೊಕೇಶನ್, ಕಿವಿಗಿಂಪಾದ ಹಾಡುಗಳು, ಹಾಗೂ ಎಲ್ಲರ ವೃತ್ತಿಪರತೆ, ಕಾಳಜಿಯಿಂದ ಈ ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದಾರೆ ನಿರ್ಮಾಪಕರು. ಸತ್ಯ ತಿಳಿಯಲು ಸ್ಪಲ್ಪ ದಿನ ಕಾಯಬೇಕಷ್ಟೇ. (ಒನ್ ಇಂಡಿಯಾ ಕನ್ನಡ)


Click it and Unblock the Notifications











