ಅಲೆಮಾರಿಗೆ ಕುಂಬಳಕಾಯಿ: ಅಡ್ಡಕ್ಕೆ ಶ್ರೀನಿವಾಸ್ ರೆಡಿ
ಬಿ ಕೆ ಶ್ರೀನಿವಾಸ್ ನಿರ್ಮಿಸುತ್ತಿರುವ ಅಲೆಮಾರಿ ಚಿತ್ರಕ್ಕೆ ನಾಳೆ ಕುಂಬಳಿಕಾಯಿ ಒಡೆಯಲಾಗುವುದು. ಈಗಾಗಲೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಇತ್ತೀಚಿಗೆ ನಗರದ ಮಿನರ್ವ ಮಿಲ್ ನಲ್ಲಿ ಪೇಟೆ ಬೀದಿಯ ಸೆಟ್ ಹಾಕಿ ಸಿಂಗಲ್ ಶಾಟ್ ನಲ್ಲಿ ಐದು ನಿಮಿಷಗಳ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು.
ನಂತರ ಇನ್ನೊಂದು ಹಾಡಿನ ಶೂಟಿಂಗ್ ಸಹ ಮುಗಿದಿದ್ದು ನಾಳೆ ಸಂಜೆ ಕುಂಬಳಕಾಯಿ ಒಡೆಯಲಾಗುವುದು ಎಂದು ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ನಿರ್ದೇಶಕ 'ಸಂತೂ' ಅವರಿಗೆ ಅಲೆಮಾರಿ ಚಿತ್ರ ಪ್ರಥಮ ಚಿತ್ರ.
ಮುಂದೆ ಶ್ರೀನಿವಾಸ್ ನಿರ್ಮಿಸಲಿರುವ ಚಿತ್ರ 'ಅಡ್ಡ'ಕ್ಕೂ ಇವರೇ ನಿರ್ದೇಶಕರು. ಈ ಅಲೆಮಾರಿ ಚಿತ್ರಕ್ಕೆ ಲೂಸ್ ಮಾದ ಯೋಗೇಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರಧಾರಿಗಳು. ಅಲೆಮಾರಿಗೆ ಅರ್ಜುನ್ ಜನ್ಯ ಸಂಗೀತವಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada movie Alemari shooting completes tomorrow. B K Sriniavs production Santhu is the Director. Yogesh and Radhika pandit starer.


Click it and Unblock the Notifications











