'ಕೋ ಕೋ' ಚಿತ್ರದ ಶೂಟಿಂಗ್ ಗೆ ಶುಭಂ, ಶೀಘ್ರ ತೆರೆಗೆ
ನಿರ್ದೇಶಕ ಚಂದ್ರು ಅವರ ನಿರೀಕ್ಷೆಯ ಚಿತ್ರ 'ಕೋ ಕೋ' ಶೂಟಿಂಗ್ ಮುಕ್ತಾಯಗೊಳಿಸಿದೆ. ಬಾಕಿ ಇದ್ದ ಡಾಬಾ ಸಾಂಗ್ ಒಂದಕ್ಕೆ ಮೈಲಾರಿಯಲ್ಲಿ ಶಿವಣ್ಣನ ಜೊತೆ "ಊರಿಂದ ಓಡಿಬಂದ..."ಹಾಡಿಗೆ ಹೆಜ್ಜೆ ಹಾಕಿ ಪಡ್ಡೆಗಳ ಮೈ ಬೆಚ್ಚಗೆ ಮಾಡಿದ್ದ ಬೆಡಗಿ ಸಂಜನಾ ನರ್ತಿಸುವುದರೊಂದಿಗೆ ಶೂಟಿಂಗ್ ಸಮಾಪ್ತಿಯಾಗಿದೆ.
ಈ ಹಾಡಿನಲ್ಲಿ ಸಂಜನಾರೊಂದಿಗೆ ಶ್ರೀನಗರ ಕಿಟ್ಟಿ, ರಾಜು ತಾಳಿಕೋಟೆ, ಮಿತ್ರ ಹಾಗೂ ಕಾಮಿಡಿ ಕಿಂಗ್ ಸಾಧು ಕೋಕಿಲ ಸಹನರ್ತಕರಾಗಿ ಹೆಜ್ಜೆ ಹಾಕಿದ್ದಾರೆ. ಸತತ ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಿರುವ ಈ ಹಾಡು 'ಕೋ ಕೋ' ಚಿತ್ರದ ಹೈಲೈಟ್ ಗಳಲ್ಲೊಂದು ಎಂದಿದ್ದಾರೆ ನಿರ್ದೇಶಕ ಆರ್ ಚಂದ್ರು.
ಈ ಹಾಡಿಗೆ 'ರಿಂಗ ರಿಂಗ...' ಎಂಬ ಜನಪ್ರಿಯ ಹಾಡಿಗೆ ಕೋರಿಯೊಗ್ರಫಿ ಮಾಡಿರುವ ರಘು ನಿರ್ದೆಶನವಿದೆ. ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಈ ಕಮರ್ಷಿಯಲ್ ಹಾಡಿಗೆ ಸೆಟ್ ಹಾಕಿರುವುದು ವಿಶೇಷ. ಕೆ ಸಿ ಚಂದ್ರಸೇಖರ್ ಕ್ಯಾಮರಾ ಕೈಚಳಕ ಈ ವಿಭಿನ್ನ ಹಾಡಿಗಿದೆ. ಒಟ್ಟಿನಲ್ಲಿ ಕೋ ಕೋ ಚಿತ್ರ ಶೂಟಿಂಗ್ ಮುಗಿಸಿ ತೆರೆಗೆ ಬರಲು ರೆಡಿಯಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
The Bharani Minerals much expected Kannada film ‘Ko Ko' has completed the shooting. It has the direction of R Chandru and Srnagara Kitty and Priyamani Pair.


Click it and Unblock the Notifications











