»   » 'ನಂದ' ಚಿತ್ರದಲ್ಲಿ ಶಿವಣ್ಣನ ಮೇಲೆ ಕೊಲೆ ಆರೋಪ

'ನಂದ' ಚಿತ್ರದಲ್ಲಿ ಶಿವಣ್ಣನ ಮೇಲೆ ಕೊಲೆ ಆರೋಪ

Subscribe to Filmibeat Kannada

ನಂಬಿದವರೇ ಕೈ ಕೊಟ್ಟಾಗ ನಂಬಿಕೆಗೆ ಬೆಲೆ ಏನು ಎಂಬ ಪ್ರಶ್ನೆ ಉದ್ಬವಿಸುತ್ತದೆ. ಕೊಲೆ ಆರೋಪದ ಮೇಲೆ ಬಂಧಿತನಾಗಿದ್ದ ನಂದನನ್ನು ಪೋಲಿಸರು ನ್ಯಾಯಾಲಯಕ್ಕೆ ಕರೆತಂದಿರುತ್ತಾರೆ. ನಂದನಿಗೆ ನಂಬಲಾಗದ ಆ ಕ್ಷಣ. ಯಾರ ಮೇಲೆ ತನ್ನ ಪ್ರಾಣವಿಟ್ಟಿರುತ್ತಾನೋ ಆಕೆ ಕಟಕಟೆಯಲ್ಲಿ ನಿಂತು ನಂದನ ವಿರುದ್ದ ಸಾಕ್ಷಿ ಹೇಳುವುದಲ್ಲದ್ದೆ ತನ್ನ ತಂದೆಯನ್ನು ಕೊಲೆ ಮಾಡಿದ್ದು ಇವನೆ ಎಂದು ನಾಯಕಿ ಇನ್ನೊಂದು ಕೊಲೆ ಆರೋಪ ಹೊರಸಿದ್ದಾಗ ಅಲ್ಲಿದ್ದವರು ಆಕೆಯ ಮಾತಿಗೆ ಜೊತೆಯಾಗುತ್ತಾರೆ.

ಈ ಕಹಿಸತ್ಯವನ್ನು ಆಲಿಸಿ ನೊಂದ ನಂದ ತನ್ನ ಪರ ವಾದಿಸಲು ನನಗೆ ವಕೀಲರು ಬೇಕು ಎಂದು ನ್ಯಾಯಾಧೀಶರನ್ನು ಕೇಳುವ ಸನ್ನಿವೇಶವನ್ನು ಶ್ರೀಕಂಠೀರವ ಸ್ಟೂಡಿಯೋದಲ್ಲಿ ನಿರ್ಮಿಸಲಾದ ನ್ಯಾಯಾಲಯದ ಸೆಟ್‌ನಲ್ಲಿ ನಿರ್ದೇಶಕ ಅನಂತರಾಜು ಚಿತ್ರೀಕರಿಸಿಕೊಂಡರು.

ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ ನಂದ ಚಿತ್ರಕ್ಕೆ ಅನಂತರಾಜು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಮಾಹಿನ್ ಕತೆ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ರಾಮು, ಗಂಡಸಿ ನಾಗರಾಜ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ನಂದದಲ್ಲಿ ಶಿವು, ಸಂಧ್ಯಾ ನರ್ತನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada