»   » ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ರಸಗುಲ್ಲ!

ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ರಸಗುಲ್ಲ!

Subscribe to Filmibeat Kannada
richa in rasagulla movie
ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರು 'ರಸಗುಲ್ಲ' ಸವಿಯಬಹುದು.ಗೋವರ್ಧನ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ರಸಗುಲ್ಲದಲ್ಲಿ ಖ್ಯಾತ ನಟ ಕುಲಭೂಷಣ್ ಖರಬಂದ ವಿಜ್ಞಾನಿಯಾಗಿ ನಟಿಸುತ್ತಿರುವುದು ವಿಶೇಷ. ನಿರ್ದೇಶಕರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಗೀತ ನಿರ್ದೇಶನದ ಜಬಾಬ್ದಾರಿ ಹೊತ್ತಿರುವುದು ಮತ್ತೊಂದು ವಿಶೇಷ.

ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ 'ರಸಗುಲ್ಲ' ಚಿತ್ರಕ್ಕೆ ಮಾತುಗಳ ಜೋಡಣೆ ಕಾರ್ಯ ಮುಗಿದಿದೆ. ಯೋಜನೆಯಂತೆ ರಸಗುಲ್ಲ ಚಿತ್ರೀಕರಣವನ್ನು ನಿರ್ಮಾಪಕಿ ಸಂಜನಾ ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಪಿಯೂಷ್, ಆನಂದ್, ರೀಚಾ,ಅರ್ಯ,ಕುಲಭೂಷಣ್ ಖರಬಂದ ಮುಂತಾದವರಿದ್ದಾರೆ. ಲೀಲಾಮನೋಹರ್ ನಿರ್ಮಾಣ ನಿರ್ವಹಣೆ ಇರುವ ಚಿತ್ರಕ್ಕೆ ರುದ್ರಮೂರ್ತಿ ಶಾಸ್ತ್ರಿ ಗೀತರಚನೆ ಹಾಗೂ ಸಂಭಾಷಣೆ, ದಿವಾಕರ್ ರಾವ್ ಛಾಯಾಗ್ರಹಣ, ಪಿ.ಆರ್.ಸೌಂದರರಾಜ್ ಸಂಕಲನವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada