For Quick Alerts
  ALLOW NOTIFICATIONS  
  For Daily Alerts

  ಲವ್ಲಿ ಸ್ಟಾರ್ ಪ್ರೇಮ್ ಈಗ ಪೊಲೀಸ್ ಮತ್ತು ರೌಡಿ

  |

  ಕನ್ನಡದ ಲವ್ಲಿ ಸ್ಟಾರ್ ಪ್ರೇಮ್ ಬದಲಾಗಲು ಬಯಸಿದ್ದಾರೆ. ಅಂದ್ರೆ ತಮ್ಮ ಈಗಿನ ಲವ್ಲಿ ಸ್ಟಾರ್ ಇಮೇಜ್ ಕಳಚಲು ಸಿದ್ಧರಾಗಿದ್ದಾರೆ. ರಫ್ ಅಂಡ್ ಟಫ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಪ್ರೇಮ್, ತಮ್ಮ ಸೆಟ್ಟೇರಲಿರುವ ಎರಡು ಚಿತ್ರಗಳಲ್ಲಿ ಪೊಲೀಸ್ ಹಾಗೂ ರೌಡಿ ಪಾತ್ರಗಳನ್ನು ಮಾಡಲಿದ್ದಾರೆ.

  ಶತ್ರು ಎಂಬ ಚಿತ್ರದಲ್ಲಿ ಪ್ರೇಮ್ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. 'ಕೆಟ್ಟವನು' ಹೆಸರಿನ ಚಿತ್ರದಲ್ಲಿ ಅವರು ರೌಡಿ. ಅಂದರೆ ಎರಡೂ ಚಿತ್ರಗಳಲ್ಲೂ ಲವ್ಲೀ ಸ್ಟಾರ್ ಪ್ರೇಮ್, ಹೊಡೆದಾಡುತ್ತಾರೆ, ಬಡಿದಾಡುತ್ತಾರೆ. ಅದಕ್ಕೆ ಬೇಕಾದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಪ್ರೇಮ್ ಗಳಿಸಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ.

  ತಮ್ಮ ಇಮೇಜ್ ಬದಲಾವಣೆಗಾಗಿ ಶತ್ರು ಚಿತ್ರದಲ್ಲಿನ ಪೊಲೀಸ್ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಪ್ರೇಮ್. ಕೆಟ್ಟವನು ಚಿತ್ರದಲ್ಲಿನ ಪಾತ್ರದ ಬಗ್ಗೆ ಪ್ರೇಮ್ ಹೇಳುವುದಿಷ್ಟು. "ಚಿತ್ರದಲ್ಲಿ ನನ್ನದು ರೌಡಿ ಪಾತ್ರ. ನಿಜ ಜೀವನದ ರೌಡಿಯೊಬ್ಬಯಾಗಿದ್ದವನ ಕಥೆ ಇದು. ಯಾರೆನ್ನುವುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ನಿರ್ದೇಶಕರು 'ಪ್ರಿಯಾ ಬೆಳ್ಳಿಯಪ್ಪ'. ಶೂಟಿಂಗ್ ಫೆಬ್ರವರಿ ಅಂತ್ಯದಲ್ಲಿ ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Lovely Star Prem Kumar acts Police Role in Kannada Movie Shathru. And also he accepted Rowdy role in movie Kettavnu.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X