ಪ್ರೇಮ್ ಮತ್ತು ಕರಿಷ್ಮಾ ನಡುವಿನ ರುಸುರುಸು ಉಮ್ಮಾ

'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇದೆಯಂತೆ. ಅದು ಹಾಗಂತೆ ಹೀಗಂತೆ ಎಂಬುದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ತರ್ಲೆ ಮಾಡಿತ್ತು. ಇಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲ. ಕಡೆಗೆ ಪ್ರೇಮ್‌ರನ್ನು ಅವರ ಪತ್ನಿಯೂ ಅನುಮಾನದಿಂದ ನೋಡುವಂತಾಗಿತ್ತು.
ಚಿತ್ರದಲ್ಲಿ ಆ ತರಹದ್ದೇನು ಇಲ್ಲ. ಫ್ಯಾಮಿಲಿ ಸಮೇತ ಬಂದು ನಮ್ಮ ಚಿತ್ರ ನೋಡಬಹುದು ಎಂದು ಪ್ರೇಮ್ ಹೇಳಿದ ಬಳಿಕ ಎಲ್ಲವೂ ತಣ್ಣಗಾಗಿತ್ತು. ಆದರೆ ಅವರ ಪತ್ನಿಗೆ ಮಾತ್ರ ಆ ಅನುಮಾನ ಹೋಗಿರಲಿಲ್ಲ. ಚಿತ್ರದಲ್ಲಿ ಆ ರೀತಿಯ ಸೀನ್ ಇದ್ದೇ ಇದೆ ಎಂಬುದು ಅವರ ಗುಮಾನಿ. ಈ ಬಗ್ಗೆ ಪತಿ ಪ್ರೇಮ್ ರನ್ನು ಪದೇ ಪದೇ ಕೇಳಿ ಸತಾಯಿಸುತ್ತಿದ್ದಾರಂತೆ. ಬಳಿಕ ಆಕೆಯನ್ನು ಒಪ್ಪಿಸುವಷ್ಟರಲ್ಲಿ ಪ್ರೇಮ್‌ಗೆ ಸಾಕು ಬೇಕಾಯಿತು ಎಂಬುದು ಬೇರೆ ಸುದ್ದಿ.
ಚುಂಬನದಲ್ಲಿ ಧೂದ್‌ಪೇಡ ದಿಗಂತ್ ಕೂಡ ಯಾರಿಗೂ ಕಮ್ಮಿಯಿಲ್ಲ!
More from Filmibeat
English summary
Lovely Star Prem's I'm Sorry... Mathe Banni Preethsona kiss between him and his co-star Karishma Tannah that's got people talking.


Click it and Unblock the Notifications











