For Quick Alerts
  ALLOW NOTIFICATIONS  
  For Daily Alerts

  ಆಕ್ಷನ್, ಕಟ್ ಹೇಳಲಿದ್ದಾರೆ ಗೀತ ಸಾಹಿತಿ ಕೆ ಕಲ್ಯಾಣ್

  By Rajendra
  |

  ಕನ್ನಡ ಚಿತ್ರಗೀತೆಗಳ ಮೂಲಕ ಹೊಸ ಪುಳಕ ಉಂಟು ಮಾಡಿದ ಗೀತ ಸಾಹಿತಿ ಕೆ ಕಲ್ಯಾಣ್. ಅವರ ಸ್ವಚ್ಛ, ಸುಂದರ, ಸುಮಧುರ ಗೀತೆಗಳು ಕಲಾರಸಿಕರ ಮನತಣಿಸಿವೆ. "ಈ ಸುಂದರ ಬೆಳದಿಂಗಳ.. ಈ ತಂಪಿನ ಅಂಗಳದಲ್ಲಿ..." ಎಂದು ಬರೆದಕಲ್ಯಾಣ್ ಈಗ ರಮೇಶ್ ಅರವಿಂದ್ ಅವರಿಗೆ ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಸದ್ಯಕ್ಕೆ ಚಿತ್ರಕತೆ, ಕತೆ ಹೆಣೆಯುವಲ್ಲಿ ಕಲ್ಯಾಣ್ ಮಗ್ನರಾಗಿದ್ದಾರೆ.

  "ಚಿತ್ರ ಆರಂಭವಾಗಲು ಇನ್ನೂ ಸ್ವಲ್ಪ ಸಮಯ ಹಿಡಿಸುತ್ತದೆ. ಮೊದಲು ಚಿತ್ರಕತೆ ಸಿದ್ಧವಾಗಬೇಕು. ಚೊಚ್ಚಲ ಚಿತ್ರವಾದ ಕಾರಣ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ.ಸಂಗೀತ ನಿರ್ದೇಶಕನಾಗಿ ಈಗಾಗಲೆ ಯಶಸ್ಸು ಕಂಡಿದ್ದೇನೆ. ಚಿತ್ರನಿರ್ದೇಶನದಲ್ಲೂ ಗೆಲ್ಲಬೇಕೆಂಬ ಆಸೆ ಇದೆ " ಎಂದಿದ್ದಾರೆ ಕಲ್ಯಾಣ್.

  "ಕಲ್ಯಾಣ್ ಅವರ ಶಕ್ತಿ ಸಾಮರ್ಥ್ಯಗಳ ಬಗ್ಗೆ ನನಗೆ ನಂಬಿಕೆ ಇದೆ. ಚಿತ್ರ ನಿರ್ದೇಶನದಲ್ಲೂ ಅವರು ಗೆದ್ದೇ ಗೆಲ್ಲುತ್ತಾರೆ" ಎಂಬ ವಿಶ್ವಾಸವನ್ನು ರಮೇಶ್ ಅರವಿಂದ್ ವ್ಯಕ್ತಪಡಿಸಿದ್ದಾರೆ. ಕಲ್ಯಾಣ್ ನಿರ್ದೇಶನ ಎಂದ ಮೇಲೆ ಕತೆ, ಚಿತ್ರಕತೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ರಮೇಶ್ ಕೂಡಲೆ ಒಪ್ಪಿ ಚಿತ್ರಕ್ಕೆ ಸಹಿಹಾಕಿದ್ದಾರಂತೆ.

  English summary
  Kannada films renowned lyricist and music director K Kalyan to become a director. He will says action, cut to Ramesh Aravind. At present K Kalyan focused on writing the story and screen play of the film. Ramesh Aravind also expressed his confident on Kalyan direction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X