ಮೈಸೂರು ಲಲಿತ ಮಹಲ್‌ನಲ್ಲಿ ಮಣಿರತ್ನಂ ಮುಂದಿನ ಚಿತ್ರ

ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರ 'ಭಕ್ತ ಅಂಬರೀಷ' ಚಿತ್ರವನ್ನು ಮೈಸೂರು ಅರಮನೆಯಲ್ಲಿ ಚಿತ್ರೀಕರಿಸಲು ಅನುಮತಿ ನೀಡಲಾಗಿತ್ತು. ಆದರೆ ಆ ಚಿತ್ರ ಕಡೆಗೂ ಕನಸಾಗಿಯೇ ಉಳಿಯಿತು. 'ಭಕ್ತ ಅಂಬರೀಷ' ಚಿತ್ರವನ್ನು ಮಾಡಬೇಕು ಎಂಬ ಅಣ್ಣಾವ್ರ ಕನಸು ಕಡೆಗೂ ಕೈಗೂಡಲಿಲ್ಲ. ಈಗ ಮಣಿರತ್ನಂ ಅವರು ತಮ್ಮ ಮುಂದಿನ ಚಿತ್ರಕ್ಕೆ ಮೈಸೂರು ಅರಮನೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಕಲ್ಕಿ ಕೃಷ್ಣಮೂರ್ತಿ ವಿರಚಿತ ತಮಿಳಿನ ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವಂ' ಬೆಳ್ಳೆತೆರೆಗೆ ತರುತ್ತಿದ್ದಾರೆ ಮಣಿರತ್ನಂ. 10 ಮತ್ತು 11ನೇ ಶತಮಾನದ ಚೋಳರ ರಾಜಪರಂಪರೆಯ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ವಿಜಯ್ ಮತ್ತು ಮಹೇಶ್ ಬಾಬು ಮುಖ್ಯಭೂಮಿಕೆಯಲ್ಲಿರುವ ಚಿತ್ರದ ನಾಯಕಿ ಬೆಂಗಳೂರು ಬೆಡಗಿ ಅನುಷ್ಕಾ.
ಈ ಚಿತ್ರದ ಬಜೆಟ್ ರು.200 ಕೋಟಿ ಎನ್ನಲಾಗಿದೆ. ಈ ಹಿಂದೆ 'ಗುರು' ಚಿತ್ರವನ್ನು ಬಾಗಲಕೋಟೆಯಲ್ಲಿ ಚಿತ್ರೀಕರಿಸಿದ್ದರು. 'ರಾವಣ್' ಚಿತ್ರವನ್ನು ಹೊಗೇನಕಲ್‌ನ ಸುಂದರ ತಾಣಗಳಲ್ಲಿ ಸೆರೆಹಿಡಿದಿದ್ದರು. ನನ್ನ ಚಿತ್ರಕ್ಕೆ ಮೈಸೂರು ಹೇಳಿಮಾಡಿಸಿದಂತಿದೆ. ಮೈಸೂರು ಸುತ್ತಮುತ್ತಲೂ ಚಿತ್ರೀಕರಣ ನಡೆಸುವುದಾಗಿ ಮಣಿರತ್ನಂ ತಿಳಿಸಿದ್ದಾರೆ.


Click it and Unblock the Notifications











