ಮುಖಪುಟಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು!

By Staff

ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಸಂತಸದ ಸುದ್ದಿ. ರೂಪಾ ಅಯ್ಯರ್ ನಿರ್ದೇಶಿಸಿ, ನಟಿಸಿದ್ದ ಕನ್ನಡದ 'ಮುಖಪುಟ-ದಿ ಕವರ್ ಪೇಜ್' ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಐರ್ಲೆಂಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ' ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಸಿಲ್ವೆರ್ ಫಿಯರ್ರಾ' ಪ್ರಶಸ್ತಿಗೆ 'ಮುಖಪುಟ' ಭಾಜನವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಪ್ರಶಸ್ತಿ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ. ಎಚ್ಐವಿ ಪೀಡಿತರು, ಪರಿಸರ ಹಾಗೂ ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳನ್ನು ಇಡೀ ಜಗತ್ತಿಗೆ ತೋರಿಸುವ ಆಸೆಯಿತ್ತು. ಆ ನಿಟ್ಟಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ ಎಂದರು.

ಐರ್ಲೆಂಡ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 34 ದೇಶಗಳ ಸುಮಾರು 700 ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅಂತಿಮ ಹಂತದಲ್ಲಿ 'ಮುಖಪುಟ' ಸೇರಿದಂತೆ ಏಳು ಚಿತ್ರ ಸ್ಪರ್ಧೆಯಲ್ಲಿದ್ದವು. ಆ ಪೈಕಿ ಮುಖಪುಟ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮುಂದಿನ ತಿಂಗಳು ನಡೆಯಲಿರುವ ಸಮಾರಂಭದಲ್ಲಿ ಎರಡೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

'ಮುಖಪುಟ' ಚಿತ್ರ ದಕ್ಷಿಣ ಆಫ್ರಿಕಾ, ವೇಲ್ಸ್, ಈಜಿಪ್ಟ್, ಥಾಯ್ಲೆಂಡ್ ಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರವನ್ನು ಎಲ್ಲಾ ಖಂಡಗಳಿಗೂ ತಲುಪಿಸುವ ಉದ್ದೇಶ ರೂಪಾ ಅಯ್ಯರ್ ಅವರದು. ಮುಖಪುಟವನ್ನು150 ದೇಶಗಳಿಗೆ ಕಳುಹಿಸುವುದಾಗಿ ರೂಪಾ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X