»   » ಪ್ರಭುದೇವ ನಂಬಿದ ನಯನತಾರಾಗೆ ಪಾನೀಪುರಿಗೇ ಕಾಸಿಲ್ಲ

ಪ್ರಭುದೇವ ನಂಬಿದ ನಯನತಾರಾಗೆ ಪಾನೀಪುರಿಗೇ ಕಾಸಿಲ್ಲ

Posted By:
Subscribe to Filmibeat Kannada

ಒಂದಾನೊಂದು ಕಾಲದಲ್ಲಿ ಸೌತ್ ಇಂಡಿಯಾ ಸೆನ್ಸೇಷನ್ ಆಗಿದ್ದ ನಯನತಾರಾಗೆ ಈ ಗತಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪಾಪ, ಈ ತಾರೆಯ 'ನಯನ'ದಲ್ಲೀಗ ಕಾವೇರಿ ನದಿ ಹರಿಯುವುದೊಂದೇ ಬಾಕಿ. ಏಕೆಂದರೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿರುವ ನಯನತಾರೆಗೆ ಈಗ ಪಾನೀಪುರಿ ತಿನ್ನಲೂ ಕಾಸಿಲ್ಲವಂತೆ. ಎಲ್ಲದಕ್ಕೂ ಪಾಕೆಟ್ ಮನಿ ಪ್ರಭುದೇವರೇ ಕೊಡಬೇಕಂತೆ.

ಪ್ರಭುದೇವರನ್ನು ನಂಬಿ ಈ ತಾರಾ 'ಹಳ್ಳಕ್ಕೆ ಬಿದ್ಲಾ' ಎಂಬುದು ಈಗ ಆಕೆಗೂ ಸೇರಿ ಎದ್ದಿರುವ ಪ್ರಶ್ನೆ. ಏಕೆಂದರೆ ಕೋರಿಯೋಗ್ರಫಿ ಮಾಡಿ ಸಾಕಷ್ಟು ಸಂಪಾದಿಸುತ್ತಿದ್ದ ಪ್ರಭುದೇವ ಈಗ ಅದನ್ನು ಬಿಟ್ಟು ನಿರ್ದೇಶನ ಮಾಡುತ್ತೇನೆಂದು ಓಡಾಡುತ್ತಿದ್ದಾನಂತೆ. ನಯನತಾರಾ ಖರ್ಚಿಗೆ ಕೈಯೊಡ್ಡಿದರೆ ಪ್ರಭುದವರಿಂದ ಸಿಗುವುದು ಆಕೆಯ ಮಟ್ಟಿಗೆ ಚಿಲ್ಲರೆ ಕಾಸಂತೆ.

ಈಗ ತಪ್ಪು ಮಾಡಿದ್ದೇನೆ ಎಂದು ಆಕಗೇ ಅನಿಸಿರಲಿಕ್ಕೆ ಸಾಕು. ಅದು ಎಲ್ಲರಿಗೂ ಈ ಮೊದಲೇ ಅನಿಸಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆಯೂ ಇಲ್ಲ. ಇನ್ನೂ ಪೂರ್ತಿ ಕೆಟ್ಟಿಲ್ಲ, ಹಾಗಾಗಿಯೋ ಏನೋ, ಬುದ್ಧಿಯೂ ಪೂರ್ತಿ ಬಂದಿಲ್ಲ. ಆದರೆ ಪ್ರಭುದೇವ ಮಾತ್ರ ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂದಿದ್ದಾನೆ ಎಂಬ ಸುದ್ದಿ ಇಲ್ಲ. ನಯನತಾರಾ ಕಣ್ಣಲ್ಲಿ ನೀರು ಹರಿದು ಪ್ರಭುದೇವರಿಗೆ ಅಭಿಷೇಕ ಯಾವಾಗಲೋ...(ಒನ್ ಇಂಡಿಯಾ ಕನ್ನಡ)

English summary
Nayantara's luxurious lifestyle seems to be not going well with her beau Prabhu Deva. Her expenditures after bidding good bye to films have reportedly become a worrying factor for the choreographer-turned-director, as he is being forced to shell out all her expenses from his pocket!
 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada