ಶಿವರಾಜ್ ಕುಮಾರ್ ಜೊತೆ ಒಲವೇ ಮಂದಾರ ಚೆಲುವೆ

By Rajendra

'ಒಲವೇ ಮಂದಾರ' ಚಿತ್ರದ ಮುಗ್ಧ ಚೆಲುವಿನ ಮೂಲಕ ಗಮನಸೆಳೆದನಟಿ ಆಕಾಂಕ್ಷಾ ನರೇಶ್. ತಮ್ಮ ಚೊಚ್ಚಲ ಚಿತ್ರದಮೂಲಕವೇ ಆಕಾಂಕ್ಷಾ ಚಿತ್ರೋದ್ಯಮದ ಗಮನವನ್ನೂ ಸೆಳೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಈಕೆ ಮೂಲತಃ ಸಿಂಧಿ ಕುಟುಂಬದ ಹಿನ್ನೆಲೆಯುಳ್ಳವರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದಲ್ಲಿ ಅಭಿನಯಿಸಲು ಆಫರ್ ಬಂದಿದೆ.ಇನ್ನೂ ಹೆಸರಿಡದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸಲಿದ್ದಾರೆ. ಆಕ್ಷನ್, ಕಟ್ ಹೇಳುತ್ತಿರುವವರು ರವಿ ಶ್ರೀವತ್ಸ.

ಇದರ ಜೊತೆಗೆ 'ದೇವಿ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಅವಕಾಶವೂ ಆಕಾಂಕ್ಷ ಅವರಪಾಲಾಗಿದೆ. ಈ ಬೆಳವಣಿಗೆಗಳಿಂದ ಖುಷಿಯಾಗಿರುವ ಆಕೆ ಕನ್ನಡ ಚಿತ್ರರಂಗದಲ್ಲೇ ನೆಲೆಯೂರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲೇ ಒಂದು ಸ್ವಂತ ಮನೆಯನ್ನೂ ಕೊಳ್ಳುವ ಕನಸು ಹೊಂದಿದ್ದಾರೆ. ಈ ಹಿಂದೆ ರೇಶ್ಮೆ ಸೀರೆ ಜಾಹೀರಾತುಗಳಲ್ಲೂ ಈಕೆ ಮಿಂಚಿದ್ದರು.

"ಫೆಮಿನಾ ಮಿಸ್ ಇಂಡಿಯಾ ಬ್ಯೂಟಿಫುಲ್ ಐಸ್" 2008ರ ಪ್ರಶಸ್ತಿಗೆ ಆಕಾಂಕ್ಷಾ ಭಾಜನರಾಗಿದ್ದರು. 'ಒಲವೇ ಮಂದಾರ' ಚಿತ್ರದ ಚುಂಬನ ಪಾತ್ರದಲ್ಲಿ ಆಕಾಂಕ್ಷ ಕಾಣಿಸಿದ್ದರಾದರೂ ತೀರಾ ಅಸಭ್ಯ ಚುಂಬನ ಪಾತ್ರಗಳನ್ನ್ನು ಒಲ್ಲೆ ಎಂದಿದ್ದಾರೆ. ಬಿಲ್ ಕುಲ್ ಅಂದ್ರು ಬಿಕಿನಿ ತೊಡಲ್ಲ ಎಂಬುದು ಆಕಾಂಕ್ಷಾ ಅವರ ಪ್ರತಿಜ್ಞೆ.

More from Filmibeat

English summary
Olave Mandara actress Akanksha to act with Hat Trick Hero Shivarajkumar in the untitled film. Her debut film Olave Mandara receives good response from audience. The Assam based Prithi (Akanksha) is a mesmerizing beauty for Shrikanth (Shrikanth) in that film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X