For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬರುತ್ತಿದ್ದಾಳೆ ತೆಲುಗಿನ ಅನಸೂಯ!

  By Staff
  |

  ''ಇದು ನನ್ನ ಪ್ರಥಮ ಪ್ರಯತ್ನ. ಸ್ನೇಹಿತರ ಜೊತೆ ಹೈದರಾಬಾದ್‌ಗೆ ಹೋಗಿದ್ದಾಗ ತೆಲುಗಿನ 'ಅನಸೂಯ' ಚಿತ್ರ ನೋಡಿದೆ. ಅದ್ಭುತವಾಗಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದು ನಿರ್ಧರಿಸಿದೆ. ಅನಸೂಯ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದೇನೆ. ತೆಲುಗು ಚಿತ್ರವನ್ನು ನಿರ್ದೇಶಿಸಿದ ರವಿಬಾಬು ಅವರ ಅಸೋಸಿಯೇಟ್ ಆಗಿದ್ದ ಶಿವಗಣಪತಿ ಕನ್ನಡದ 'ಅನು' ಚಿತ್ರವನ್ನು ನಿರ್ದೇಶಿಸಲಿದ್ದಾರೆ.'' ಎಂದರು ನಿರ್ಮಾಪಕ ಬಾಲು.

  ತೆಲುಗಿನಲ್ಲಿ ಭರ್ಜರಿ ಪ್ರದರ್ಶನ ಕಂಡ ಅನಸೂಯ ಚಿತ್ರದಲ್ಲಿ ಭೂಮಿಕಾ ನಾಯಕಿಯಾಗಿ ನಟಿಸಿದ್ದರು. ಕನ್ನಡಕ್ಕ್ಕೆ ರಿಮೇಕಾಗುತ್ತಿರುವ 'ಅನು' ಚಿತ್ರದಲ್ಲಿ ಪೂಜಾಗಾಂಧಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾಗಾಂಧಿ ಕ್ರೈಮ್ ವರದಿಗಾರ್ತಿ. ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಕೊಲೆ ರಹಸ್ಯವನ್ನು ಭೇದಿಸಲು ಬರುತ್ತಾಳೆ. ಆನಂತರ ಒಂದರ ಹಿಂದೆ ಒಂದು ಐದು ಹೆಣಗಳು ಬೀಳುತ್ತವೆ. ಆ ಕೊಲೆ ರಹಸ್ಯಗಳ ಜಾಡು ಅರಸಿ ಚಿತ್ರದ ನಾಯಕಿ ಹೊರಡುತ್ತಾಳೆ. ಚಿತ್ರಕಥೆ ಹಲವಾರು ಕುತೂಹಲ ಘಟ್ಟಗಳಲ್ಲಿ ಸಾಗುತ್ತದೆ. ಈ ಚಿತ್ರಕ್ಕೆ ನಾಯಕಿಯೇ ಕೇಂದ್ರಬಿಂದುವಾಗಿರುವ ಕಾರಣ ಪೂಜಾಗಾಂಧಿ ಸಖತ್ ಖುಷಿಯಾಗಿದ್ದರು. ದುನಿಯಾ ಚಿತ್ರದ ರಶ್ಮಿ ಮತ್ತು ನಾಗಕಿರಣ್ ವಿದ್ಯಾರ್ಥಿಗಳಾಗಿ ನಟಿಸುತ್ತಿದ್ದಾರೆ. ಮೊದಲೆ ತೆಲುಗು ಚಿತ್ರ ನೊಡಿರುವ ರಶ್ಮಿ ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸುತ್ತಿರುವುದು ನನಗೇನು ಕಷ್ಟವಾಗುತ್ತಿಲ್ಲ ಎನ್ನುತ್ತಾರೆ.

  ಜಮಾನ, ಸಿಹಿಗಾಳಿ ಚಿತ್ರಗಳ ಛಾಯಾಗ್ರಹಣದ ನಂತರನಿರಂಜನ್ ಬಾಬು ಅವರಿಗೆ ಇದು ಮೂರನೆಯ ಚಿತ್ರ. ಚಿತ್ರದಲ್ಲಿ ನೈಟ್ ಎಫೆಕ್ಟ್ ಜಾಸ್ತಿ ಇರುವ ಕಾರಣ ಇವರ ಜವಾಬ್ದಾರಿ ಜಾಸ್ತಿ. ಇನ್ನು ಸಂಗೀತ ನಿರ್ದೇಶನ ಶೇಖರ್ ಚಂದ್ರ ಅವರದು. ತೆಲುಗಿನ ಅನಸೂಯ ಹಾಗೂ ಕನ್ನಡದ ಅನು ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶಕರು. ತೆಲುಗಿನ ಟ್ಯೂನ್‌ಗಳನ್ನು ಹಾಗೇ ಎತ್ತಿ ಇಳಿಸುತ್ತಾರೆಂದು ಬೇರೆ ಹೇಳಬೇಕಾಗಿಲ್ಲ. ಚಿತ್ರದಲ್ಲಿ ಎರಡು ಹಾಡುಗಳು ಮಾತ್ರ ಇವೆಯಂತೆ. ಅದರಲ್ಲಿ ಒಂದು ಐಟಂ ಸಾಂಗು! ಆ ಹಾಡಿಗೆ ಬಾಂಬೆಯಿಂದ ನೃತ್ಯಗಾರ್ತಿಯನ್ನು ಕರೆಸುವ ಆಲೋಚನೆಯೂ ಇದೆಯಂತೆ ನಿರ್ಮಾಪಕರ ತಲೆಯಲ್ಲಿ.

  (ದಟ್ಸ್‌ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X