»   » ಮಿನುಗು ತಾರೆಯಾಗಿ ಪೂಜಾಗಾಂಧಿ

ಮಿನುಗು ತಾರೆಯಾಗಿ ಪೂಜಾಗಾಂಧಿ

Subscribe to Filmibeat Kannada
Pooja gandhi Minugu movie starts rolling
ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮೂರನೇ ಅತಿ ದೊಡ್ಡ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಪೂಜಾಗಾಂಧಿ. ಈಗ ಆಕೆಯ ಪ್ರತಿಭೆಗೆ ಸವಾಲೊಡ್ಡುವಂತಹ ಪಾತ್ರ ಸಿಕ್ಕಿದೆ. ಇನ್ನು ಮುಂದೆ ಆಕೆ 'ಮಿನುಗು' ತಾರೆ.

ಆಶ್ಚರ್ಯವಾಗುತ್ತಿದೆಯೇ! ಇದು ಮಿನುಗು ತಾರೆ ಕಲ್ಪನಾ ಕಥೆಯಾಗಲಿ ಅಥವಾ ಪೂಜಾಗಾಂಧಿಯ ಕಥೆಯಾಗಲಿ ಅಲ್ಲ ಎಂದು ಮಾತಿಗೆ ಶುರುವಿಟ್ಟುಕೊಂಡರು ನಿರ್ದೇಶಕ ಜಯವಂತ್. 'ಕಥೆ ಒಬ್ಬ ಜನಪ್ರಿಯ ನಾಯಕಿಯ ಸುತ್ತ ಗಿರಕಿ ಹೊಡೆಯುತ್ತದೆ. ಈ ಪಾತ್ರಕ್ಕೆ ಪೂಜಾಗಾಂಧಿಯೇ ಸರಿ ಎಂದು ತೀರ್ಮಾನಿಸಿ ಆಕೆಯನ್ನು ಸಂಪರ್ಕಿಸಿದೆವು.ಕಥೆ ಇಷ್ಟವಾಗಿ ಆಕೆ ಕೂಡಲೆ ಒಪ್ಪಿಗೆ ಸೂಚಿಸಿದರು' ಎಂದು ನಿರ್ದೇಶಕರು ಖುಷಿಯಾದರು.

ಹೆಣ್ಣಿನ ಭಾವಲೋಕವನ್ನು ತೆರೆದಿಡುವಂತಹ ಚಿತ್ರಗಳು ಈಗಾಗಲೇ ಬಹಳಷ್ಟು ಬಂದಿವೆ. ಪುಟ್ಟಣ್ಣ ಕಣಗಾಲರ 'ರಂಗನಾಯಕಿ'ಹಾಗೂ ತೆಲುಗಿನ 'ಶಿವರಂಜನಿ' ಚಿತ್ರಗಳನ್ನು ಉದಾಹರಿಸಬಹುದು. ಇವೆರಡೂ ಚಿತ್ರಗಳಿಗಿಂತಲ್ಲೂ ತಮ್ಮ 'ಮಿನುಗು' ಚಿತ್ರ ಭಿನ್ನವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಜಯವಂತ್. ಇನ್ನು ನಟಿ ಪೂಜಾಗಾಂಧಿ ಕುರಿತು ಹೇಳಬೇಕಾದ ಒಂದು ಮಾತಿದೆ. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ಶ್ರಮಿಸಿ ನಾಲ್ಕು ಕೆ.ಜಿ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ.

ಚಿತ್ರದ ನಾಯಕ ನಟ ಸುನಿಲ್ ರಾವ್, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸೈಕ್ಲಿಂಗ್ ಚಾಂಪಿಯನ್ ನ ಪಾತ್ರ ಅವರದು. ಇದೇ ಮೊದಲ ಬಾರಿಗೆ ಅಜಿತ್ ಹಂದೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ನಾಯಕಿಯಾಗಿ ಅಕ್ಷತಾ ರಘುನಾಥ್ ಕಾಣಿಸಲಿದ್ದಾರೆ. ಚಿತ್ರದ ನಿರ್ಮಾಪಕರು ಗಜೇಂದ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada