ಮುಂಬೈನಲ್ಲಿ ಬಾಗಿಲು ತೆರೆದ ಪ್ರಕಾಶ್ ರೈ ಡಾನ್ಸ್ ಸ್ಕೂಲ್

By Rajendra

ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ ಅವರ ಡಾನ್ಸ್ ಸ್ಕೂಲ್ ಮುಂಬೈನಲ್ಲಿ ಆರಂಭವಾಗಿದೆ. ಅಯ್ಯೋ ಅವರು ಯಾವಾಗ ಡಾನ್ಸ್ ಕಲಿತರು ಎಂದು ತಬ್ಬಿಬ್ಬಾಗಬೇಡಿ. ರೈ ಪತ್ನಿ ಕಮ್ ನೃತ್ಯ ಸಂಯೋಜಕಿ ಪೋನಿ ವರ್ಮಾ ಇದರ ಮುಂದಿರುವವರು. ಪ್ರಕಾಶ್ ರೈ ಕೇವಲ ಅವರ ಹಿಂದಿರುತ್ತಾರಷ್ಟೆ.

ಜೂನ್ 9ರಂದು ಬಾಗಿಲು ತೆರೆದ ಈ ಶಾಲೆಗೆ ಇಂಡಿಯನ್ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಎಂದು ಹೆಸರಿಟ್ಟಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ತಾರೆಗಳು ಆಗಮಿಸಿ ಶುಭ ಕೋರಿದರು. ನೀತೂ ಚಂದ್ರ, ಸಂಜಯ್ ಲೀಲಾ ಭನ್ಸಾಲಿ, ಗೋವಿಂದ, ವಿವೇಕ್ ಒಬೆರಾಯ್ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಅತಿಥಿಗಳು.

ವಿಶೇಷ ಎಂದರೆ, ಇವರಲ್ಲಿ ಬಹುತೇಕರು ಪೋನಿ ಶಿಷ್ಯರು ಎಂಬುದು ಗಮನಾರ್ಹ ಅಂಶ. ತಮಗೆ ಡಾನ್ಸ್ ಕಲಿಸಿದ ಗುರುಗಳ ಗುರುಕುಲದಲ್ಲಿ ಡಾನ್ಸ್ ಮಾಡದಿದ್ದರೆ ಹೇಗೆ? ನಟ ಗೋವಿಂದ ಒಂದೆರಡು ಸ್ಟೆಪ್ಸ್ ಹಾಕಿ ಅಲ್ಲಿದ್ದವರನ್ನು ರಂಜಿಸಿದ್ದು ವಿಶೇಷವಾಗಿತ್ತು. ಸದ್ಯಕ್ಕೆ ಮುಂಬೈನಲ್ಲಿ ಮಾತ್ರ ಈ ಡಾನ್ಸ್ ಸ್ಕೂಲ್ ತರಬೇತಿ ಆರಂಭವಾಗಿದೆ. ಮುಂದೆ ಬೆಂಗಳೂರಿನಲ್ಲೂ ಶಾಖೆ ಆರಂಭಿಸಬಹುದು. (ಏಜೆನ್ಸೀಸ್)

More from Filmibeat

English summary
Kannada actor, producer and director Prakashraj's wife, choreographer Pony Varma, launched her dance school 'India School of Performing Arts' in Mumbai on June 9. Neetu Chandra and ace director Sanjay Leela Bhansali, Govinda and Pony's rakhi brother Vivek Oberoi attended the event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X