twitter
    For Quick Alerts
    ALLOW NOTIFICATIONS  
    For Daily Alerts

    ಶೀಘ್ರ ಅಭಿಮಾನಿ ದೇವರುಗಳ ಕೈಗೆ ಪುನೀತ್ ಪುಸ್ತಕ

    By Rajendra
    |

    ವರನಟ, ಗಾನಗಂಧರ್ವ ಡಾ.ರಾಜ್ ಕುಮಾರ್ ಬಗ್ಗೆ ಈಗಾಗಲೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಅಣ್ಣಾವ್ರ ಬಗೆಗಿನ ಕೃತಿಗಳು ಅಭಿಮಾನಿಗಳ ಪಾಲಿಗೆ ರಾಮಾಯಣ, ಮಹಾಭಾರತ ಇದ್ದಂತೆ. ಈ ಪುಸ್ತಕಗಳು ಜೇಬಿಗೆ ಭಾರ ಅನ್ನಿಸಿದರು ಮನಸ್ಸಿಗೆ ಹಗುರ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಅಂತಹದ್ದೇ ಒಂದು ಪುಸ್ತಕವನ್ನು ಹೊರತರುತ್ತಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

    ಈ ಪುಸ್ತಕವನ್ನು ಹೊರತರಲು ಪುನೀತ್ ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಶ್ರಮಿಸಿದ್ದಾರೆ. ಅಣ್ಣಾವ್ರ ವ್ಯಕ್ತಿತ್ವದ ಹಲವು ಮಜಲುಗಳನ್ನು ಪುಸ್ತಕ ಪರಿಚಯಿಸಲಿದೆ. ಪುಸ್ತಕದ ಹೆಸರು 'ಡಾ.ರಾಜ್‌ಕುಮಾರ್, ವ್ಯಕ್ತಿ ಹಿಂದಿನ ವ್ಯಕ್ತಿತ್ವ'. ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿ ಅನಾವರಣಗೊಳ್ಳಲಿವೆ.

    ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬರಲಿರುವ ಪುಸ್ತಕ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಲಿದೆ. ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು.

    ಆದರೆ ಅದು ಕನಸಾಗಿಯೇ ಉಳಿಯಿತು. ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ ಎಂದಿದ್ದಾರೆ ಪುನೀತ್. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಪುಸ್ತಕವನ್ನು ತರಲಾಗುತ್ತಿದ್ದು ಜೂನ್ 2011ಕ್ಕೆ ಪುಸ್ತಕವನ್ನು ಓದುಗರ ಕೈಗಿಡಲಿದ್ದಾರೆ ಪುನೀತ್.

    ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳು ಅನಾವರಣಗೊಳ್ಳಲಿವೆ. ಅಪರೂಪದಲ್ಲೇ ಅಪರೂಪವಾದ ರಾಜಣ್ಣನ ಭಾವಚಿತ್ರಗಳನ್ನು ಪುಸ್ತಕದಲ್ಲಿ ಕಾಣಬಹುದು ಎಂದು ಪುನೀತ್ ಕೃತಿಯ ಬಗ್ಗೆ ವಿವರ ನೀಡಿದ್ದಾರೆ.

    English summary
    The youngest son of icon of Kannada cinema Dr.Rajkumar , Pueeth wants to come out with a book on his father in Kannada and English. For the wide reach he is contemplating on the international standards, something like what has come out on Amitabh Bachchan.Person behind Personalities’ is coming out in the month of June 2011.
    Thursday, April 14, 2011, 11:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X