twitter
    For Quick Alerts
    ALLOW NOTIFICATIONS  
    For Daily Alerts

    ಹೊನ್ನಾಪುರದಲ್ಲಿ ಮೈದಳೆದ ಪುಟಾಣಿ ಪಾರ್ಟಿ

    By *ರಾಜೇಂದ್ರ ಚಿಂತಾಮಣಿ
    |

    Film director Ramachanda PN
    ಮಕ್ಕಳ ಹಕ್ಕು, ಸಾಮಾಜಿಕ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳನ್ನು ಮಕ್ಕಳ ಚಿತ್ರದ ಮೂಲಕ ಹೇಗೆ ಪರಿಣಾಮಕಾರಿಯಾಗಿ ತೋರಿಸಬಹುದು ಎಂಬುದಕ್ಕೆ 'ಪುಟಾಣಿ ಪಾರ್ಟಿ' ಚಿತ್ರವೇ ಸಾಕ್ಷಿ. ಗ್ರಾಮಪಂಚಾಯಿತಿಯಂತಹ ಸ್ಥಳೀಯ ಆಡಳಿತದಲ್ಲಿ ಮಕ್ಕಳ ಸಮಿತಿಯೊಂದು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ಅಲ್ಲಿನ ಸಮಸ್ಯೆಗಳ ವಿರುದ್ಧ ಮಕ್ಕಳು ತಿರುಗಿ ಬಿದ್ದು ದೊಡ್ಡವರ ಕಣ್ಣು ತೆರೆಸುವ ಕಥಾ ಹೂರಣವನ್ನು ಚಿತ್ರ ಒಳಗೊಂಡಿದೆ.

    ಚಿಲ್ಡ್ರನ್ಸ್ ಫಿಲಂ ಸೊಸೈಟಿ ನಿರ್ಮಿಸಿರುವ ಈ ಚಿತ್ರವನ್ನು ಪಿ ಎನ್ ರಾಮಚಂದ್ರ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.ನಿರ್ದೇಶಕರು ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನಿಸ್ಟಿಟ್ಯೂಟ್ ನ ಪದವೀಧರರು ಹೌದು. ಅವರ ನಿರ್ದೇಶನದ 'ಸುಧಾ' ಚಿತ್ರ 2007ರಲ್ಲಿ ನವದೆಹಲಿಯಲ್ಲಿ ನಡೆದ ಓಸಿಯನ್ ಸಿನಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಗಳಿಸಿತ್ತು. ಪುಟಾಣಿ ಪಾರ್ಟಿ ಅವರ ನಿರ್ದೇಶನದ ಎರಡನೇ ಚಿತ್ರ.

    ಧಾರವಾಡ ಜಿಲ್ಲೆಯ ಹೊನ್ನಾಪುರ ಎಂಬ ಗ್ರಾಮದಲ್ಲಿ 'ಪುಟಾಣಿ ಪಾರ್ಟಿ' ಚಿತ್ರವನ್ನು ಸಂಪೂರ್ಣವಾಗಿಚಿತ್ರಿಸಲಾಗಿದೆ. ಸ್ಥಳೀಯ ಕಲಾವಿದರು ಹಾಗೂ ಹೊಸಬರು ಚಿತ್ರದ ಪಾತ್ರಧಾರಿಗಳು. ಚಿತ್ರದಲ್ಲಿ ಮಕ್ಕಳ ಆಸರೆಗೆ ಸಹಾನುಭೂತಿಯುಳ್ಳ ಶಾಲಾ ಶಿಕ್ಷಕರೊಬ್ಬರು ನೆರವಾಗುತ್ತಾರೆ. ಚಿತ್ರದಲ್ಲಿನ ಆಡುಭಾಷೆಯ ಸೊಗಡು ಸೊಗಸಾಗಿದೆ.

    ''ಭಾರತದಲ್ಲಿಮಕ್ಕಳ ಚಿತ್ರ ಎಂದರೆ ಸಾಮಾನ್ಯವಾಗಿ ಜಾದೂ ಅಂಶಗಳಿರಬೇಕು ಅಥವಾ ಸಾಹಸ ಮನೋಭಾವದ್ದಾಗಿರಬೇಕು ಎಂಬ ಪರಿಕಲ್ಪನೆ ಇದೆ. ಇದರ ಹೊರತಾಗಿ ಆಲೋಚಿಸುವಂತಿರಬೇಕು.ಮದ್ಯಪಾನದಂತಹ ಸಾಮಾಜಿಕ ಅಂಶಗಳೊಂದಿಗೆ ಮಕ್ಕಳ ಚಿತ್ರ ಮಾಡುವುದೆಂದರೆ ನಿಜಕ್ಕೂ ದೊಡ್ಡ ಸವಾಲು'' ಎನ್ನುತ್ತಾರೆ ನಿರ್ದೇಶಕ ರಾಮಚಂದ್ರ.

    ಧಾರವಾಡದ ಹಳ್ಳಿಯೊಂದರಲ್ಲಿ 19 ದಿನಗಳ ಕಾಲ ಸ್ಥಳೀಯ ರಂಗ ಕಲಾವಿದರನ್ನು ಬಳಸಿಕೊಂಡು ಈ ಚಿತ್ರವನ್ನು ತೆರೆಗೆ ತರಲಾಗಿದೆ. ಅವರಲ್ಲಿ ಕೆಲವರು ಆಟೋರಿಕ್ಷಾ ಚಾಲಕರು, ದಿನಸಿ ಅಂಗಡಿ ಇಟ್ಟುಕೊಂಡಿರುವವರು, ಪರಿಸರದ ಬಗ್ಗೆ ಕಾಳಜಿಯುಳ್ಳವರು, ಕಂಪ್ಯೂಟರ್ ಗ್ರಾಫಿಕ್ಸ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಚಿತ್ರೀಕರಣದ ಅನುಭವಗಳನ್ನು ವಿವರಿಸಿದರು.

    ಎಲ್ಲರೂ ಸಿನಿಮಾ ಮಾಧ್ಯಮಕ್ಕೆ ಹೊಸಬರು. ಮೂರು ದಿನಗಳ ಕಾಲ ಚಿತ್ರೀಕರಣ ಪೂರ್ವ ಕಾರ್ಯಾಗಾರ ನಡೆಸಿ ಮಕ್ಕಳು ಕ್ಯಾಮೆರಾ ಎದುರಿಸುವಂತೆ ಅಣಿಗೊಳಿಸಲಾಯಿತು. ಹತ್ತನೇ ದಿನದ ಚಿತ್ರೀಕರಣದ ಹೊತ್ತಿಗೆ ಅವರೆಲ್ಲಾ ಒಂದೇ ಟೆಕ್ ಗೆ ಓಕೆ ಎನ್ನುವಂತೆ ನಟಿಸಿದರು! ಎಂದು ತಮ್ಮ ಅನುಭವಗಳನು ಸ್ಮರಿಸಿದರು ನಿರ್ದೇಶಕರು.

    ಸಮೀರ್ ಮಹಾಜನ್ (ಛಾಯಾಗ್ರಹಣ), ಅರುಣಾಭಾ ಮುಖರ್ಜಿ (ಸಂಕಲನ), ಅಲೋಕ್ ಡೆ (ಧ್ವನಿ ಗ್ರಹಣ), ಸಂತೋಷ್ ಕುಮಾರ್ (ಧ್ವನಿಗ್ರಹಣ ಮತ್ತು ವಿನ್ಯಾಸ), ವಿಜಯ್ ಪ್ರಕಾಶ್ (ಸಂಗೀತ ನಿರ್ದೇಶನ), ಅಪುರ್ಬ ಬ್ಯಾನರ್ಜಿ (ಕಲಾ ನಿರ್ದೇಶನ). ಚಿತ್ರದಲ್ಲಿ ಬಾಲ ಕಲಾವಿದರು ಒಳಗೊಂಡಂತೆ 30 ಕ್ಕೂ ಅಧಿಕ ಕಲಾವಿದರಿದ್ದಾರೆ.

    Tuesday, July 14, 2009, 18:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X