For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಜೊತೆ ಛಾನ್ಸ್ ಗಿಟ್ಟಿಸಿದ ರಾಗಿಣಿ ದ್ವಿವೇದಿ

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ 'ಶಿವ'. ಈ ಚಿತ್ರಕ್ಕೆ ನಾಯಕಿಯಾಗಿ ರಾಗಿಣಿ ದ್ವಿವೇದಿಯನ್ನು ಆಯ್ಕೆ ಮಾಡಲಾಗಿದೆ. ರೂಪದರ್ಶಿಯೂ ಆಗಿರುವ ರಾಗಿಣಿ ಅಭಿನಯದ 'ಕೆಂಪೇಗೌಡ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗ ಶಿವಣ್ಣನ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ.

  ಓಂ ಪ್ರಕಾಶ್ ರಾವ್ ಆಕ್ಷನ್, ಕಟ್ ಹೇಳುತ್ತಿರುವ ಈ ಚಿತ್ರ ಜೂನ್‌ನಲ್ಲಿ ಸೆಟ್ಟೇರಲಿದೆ. ಬರೋಬ್ಬರಿ 11 ವರ್ಷಗಳ ಬಳಿಕ ಶಿವರಾಜ್ ಕುಮಾರ್ ಮತ್ತು ಓಂ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚಿತ್ರ. ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಜಾಕಿಯಾಗಿ ಶಿವಣ್ಣ ಈ ಚಿತ್ರದಲ್ಲಿ ಕಾಣಿಸಲಿರುವುದು ವಿಶೇಷ.

  ಸಾಹಸಪ್ರಧಾನವಾದ ಈ ಚಿತ್ರದ ಅಬ್ಬಾಸ್ ಮಸ್ತಾನ್ ಅವರ 'ರೇಸ್'ಚಿತ್ರದ ನೆರಳಿದೆಯಂತೆ. ಚಿತ್ರಕತೆ ಹಲವಾರು ತಿರುವುಗಳಿದ್ದು ಕುತೂಹಲಭರಿತವಾಗಿ ಸಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಶ್ರೀಕಾಂತ್. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Model turned actress Ragini Dwivedi to act with Shivarajkumar for his forthcoming film 'Shiva'. The film will be launched in June directing by Omprakash Rao. The film is an out and out thriller in which Shivarajkumar is slated to play the role of a jockey said the producer of the film Srikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X