ಜಪಾನಿ ಭಾಷೆಗೆ ರಜನಿಕಾಂತ್ ಚಿತ್ರ ಕೊಚಡಯಾನ್
ಸೂಪರ್ ಸ್ಟಾರ್ ರಜನಿಕಾಂತ್ ಸಿಗರೇಟ್ ಸೇದುವ ಸ್ಟೈಲ್‌ಗೆ ಕೇವಲ ಭಾರತದಲ್ಲಷ್ಟೇ ಅಲ್ಲ ಜಪಾನ್‌ನಲ್ಲೂ ಶಿಳ್ಳೆ ಹಾಕಿ ಸಂಭ್ರಮಿಸುವ ಅಪಾರ ಅಭಿಮಾನಿ ಬಳಗವಿದೆ. ತಮ್ಮ ಮಹತ್ವಾಕಾಂಕ್ಷಿ ಕೋಚಡಯಾನ್ ಚಿತ್ರವನ್ನು ಜಪಾನೀಸ್‌ಗೆ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತದಂತೆ.
ಈ ಬಗ್ಗೆ ಚಿತ್ರದ ನಾಯಕ, ನಟಿಯರಾದ ರಜನಿ ಹಾಗೂ ದೀಪಿಕಾ ಪಡುಕೋಣೆ ಅವರೊಂದಿಗೆ ಮಾತುಕತೆಯೂ ನಡೆಯುತ್ತಿದೆ. ಸ್ವತಃ ರಜನಿಕಾಂತ್ ಹಾಗೂ ದೀಪಿಕಾ ಜಪಾನೀಸ್‌ನಲ್ಲಿ ಡಬ್ಬಿಂಗ್ ಹೇಳುವುದು ದೂರದ ಮಾತು. ಹಾಗಾಗಿ ಪರ್ಯಾಯ ವ್ಯವಸ್ಥೆಗಳು ನಡೆಯುತ್ತಿವೆ.
ರಜನಿಕಾಂತ್‌ರ ಈ ಹಿಂದಿನ ಚಿತ್ರಗಳನ್ನು ಜಪಾನ್ ಸಬ್ ಟೈಟಲ್‌ಗಳಲ್ಲಿ ಬಿಡುಗಡೆಯಾಗಿದ್ದವು. ಆದರೆ ಕೋಚಡಯಾನ್ ಚಿತ್ರವನ್ನು ಜಪಾನೀಸ್‌ನಲ್ಲೇ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಉಳಿದಂತೆ ಕೋಚಡಯಾನ್ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)
More from Filmibeat
English summary
Rajinikanth's upcoming movie Kochadaiyaan dubbing the film simultaneously in Japanese. The film will be dubbed and released simultaneously along with the other versions. Rajinikanth has an ardent fan following in Japan.


Click it and Unblock the Notifications











