For Quick Alerts
ALLOW NOTIFICATIONS  
For Daily Alerts

ತಮಿಳುನಾಡಿನಲ್ಲಿ ಕನ್ನಡತಿಗೆ ಓಟು ಹಾಕಿದ ರಜನಿಕಾಂತ್!

By Rajendra
|

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಗುಪ್ತವಾಗಿ ನಡೆಯುತ್ತದೆ ಎಂಬುದು ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಗೊತ್ತು. ವ್ಯಕ್ತಿಯೊಬ್ಬ ಯಾರಿಗೆ ಮತ ಹಾಕಿದ್ದಾನೆ ಎಂಬ ಅಂಶವನ್ನು ಗೋಪ್ಯವಾಗಿಡಲಾಗುತ್ತದೆ. ಆದರೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ವಿಚಾರದಲ್ಲಿ ಈ ವಿವರಗಳು ಬಹಿರಂಗವಾಗಿವೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ರಂಗೇರಿದೆ.

ರಜನಿಕಾಂತ್ ಅವರು ಮತದಾನ ಮಾಡುತ್ತಾರೆ ಎಂದ ಮೇಲೆ ಮಾಧ್ಯಮಗಳು ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವೆ. ಸೀದಾ ಮತಗಟ್ಟೆಗೆ ದೌಡಾಯಿಸಿದ ಪತ್ರಕರ್ತರು ಅವರು ಓಟು ಹಾಕುವುದನ್ನು ಸೆರೆಹಿಡಿದು ಬಿಟ್ಟಿದ್ದಾರೆ. ರಜನಿ ಮತದಾನ ಮಾಡಿದ ದೃಶ್ಯಗಳು ಟಿವಿಗಳಲ್ಲಿ ಪ್ರಸಾರ ಭಾಗ್ಯವನ್ನು ಕಂಡು ಅವರು ಯಾರಿಗೆ ಓಟು ಹಾಕಿದ್ದಾರೆ ಎಂಬ ಅಂಶಗಳು ಬಟಾ ಬಯಲಾಗಿವೆ.

ಮುಂಬರು ಎರಡು ವರ್ಷಗಳಲ್ಲಿ ರಜನಿ ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿಯಿದೆ. ಆದರೆ ಅವರು ಬುಧವಾರ ನಡೆದ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತವನ್ನು ತಮಿಳುನಾಡಿಗೆ ವಲಸೆ ಹೋದ ಕನ್ನಡತಿಗೆ ಹಾಕಿದ್ದಾರೆ! ಯಾರು ಎಂದಿರಾ? ಅದೇ ಸ್ವಾಮಿ ಎರಡು ಎಲೆ ಚಿಹ್ನೆಯ ಎಐಎಡಿಎಂಕೆ ಪಕ್ಷದ ಅಭಿನೇತ್ರಿ ಜಯಲಲಿತಾ ಅವರ ಹೆಗ್ಗುರುತಿಗೆ ರಜನಿ ಮತದಾನ ಮಾಡಿದ್ದಾರೆ ಎನ್ನುತ್ತವೆ ಮೂಲಗಳು!

English summary
Superstar Rajnikanth caught on camera voting for Jayalalitha’s party. Later Rajni said, The price rise is an issue and we want a stable government. Television channels telecasted visuals showing Rajnikanth pressing the button but after a warning by the chief electoral officer they pulled back the visuals.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more