»   » ' ರಮ್ಯ ರಕ್ಷಿತ' ಚಿತ್ರೀಕರಣ ಮುಕ್ತಾಯ

' ರಮ್ಯ ರಕ್ಷಿತ' ಚಿತ್ರೀಕರಣ ಮುಕ್ತಾಯ

Subscribe to Filmibeat Kannada

ಜಗದಾಂಬ ಫಿಲಂಸ್ (ಕೆಂಚಿಕೊಪ್ಪ) ಲಾಂಛನದಲ್ಲಿ ಪಿ.ಹುತ್ತೇಶ್ ನಿರ್ಮಿಸುತ್ತಿರುವ 'ರಮ್ಯ-ರಕ್ಷಿತ' ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಆರು ಹಾಡುಗಳು, ಮೂರು ಸಾಹಸ ಸನ್ನಿವೇಶಗಳು ಚಿತ್ರೀಕೃತವಾದವು. ಇದಲ್ಲದೆ ಹಾಸ್ಯ ಕಲಾವಿದರಾದ ಕರಿಬಸವಯ್ಯ, ಟೆನ್ನಿಸ್‌ಕೃಷ್ಣ, ಬ್ಯಾಂಕ್‌ಜನಾರ್ಧನ್, ಬಿರಾದಾರ್, ಎಂ.ಎನ್.ಲಕ್ಷ್ಮೀದೇವಿ, ಎಂ.ಎನ್.ದಿವ್ಯ, ಮಿನಿ ದ್ವಾರಕೀಶ್ ಅವರ ಅಭಿನಯದಲ್ಲಿ ಹಾಸ್ಯ ಸನ್ನಿವೇಶಗಳನ್ನು ಮಾಗಡಿ ರಸ್ತೆಯ ಹಾರೋಹಳ್ಳಿಯ ವಠಾರದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಬೆಳಗಾಂ, ಕಾರವಾರ, ಗೋಕಾಕ್, ಅಂಬೋಲಿ ಜಲಪಾತ, ತಲಕಾಡು, ಕೊಳ್ಳೆಗಾಲ, ಮೈಸೂರು, ನಂದಿಬೆಟ್ಟ ಹಾಗೂ ಬೆಂಗಳೂರಿನ ಸುಂದರ ಹೊರಾಂಗಾಣದಲ್ಲಿ 48 ದಿವಸಗಳ ಕಾಲ ಚಿತ್ರೀಕರಣ ನಡೆಸಿರುವುದಾಗಿ ತಿಳಿಸಿದ ನಿರ್ಮಾಪಕ ಹುತ್ತೇಶ್, ಏಪ್ರಿಲ್‌ನಲ್ಲಿ 'ರಮ್ಯ ರಕ್ಷಿತ'ರನ್ನು ತೆರೆಯ ಮೇಲೆ ತರುವ ಇರಾದೆ ಇಟ್ಟುಕೊಂಡಿದ್ದಾರೆ.

ಕವಿ ರಾಜೇಶ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಪಿ.ಚೌಹಾನ್ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ, ಬೆಳ್ಳಿಯಪ್ಪ ಸಹನಿರ್ದೇಶನ, ಸೂರ್ಯಪ್ರಕಾಶ್ ಸಾಹಸ, ಸತೀಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರದೀಪ್, ಸೂರ್ಯ, ಸಂಗೀತಾಶೆಟ್ಟಿ, ಇಫಾಖಾನ್, ಚಿತ್ರಾಶೆಣೈ, ರಮೇಶ್‌ಭಟ್, ಕರಿಬಸವಯ್ಯ, ಟೆನ್ನಿಸ್‌ಕೃಷ್ಣ, ಬ್ಯಾಂಕ್‌ಜನಾರ್ಧನ್, ಎಂ.ಎನ್.ಲಕ್ಷ್ಮೀದೇವಿ, ಬಿರಾದಾರ್, ಎಂ.ಎನ್.ದಿವ್ಯ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada